ಶಿವಮೊಗ್ಗ, ಫೆ.29:
ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ನೂತನ ಅತಿಥಿಗಳನ್ನು ಮೈಸೂರು ಮೃಗಾಲಯದಿಂದ ತರಲಾಗಿದೆ. ಯಾರವರು ಗೊತ್ತಾ?


ಆಂಗ್ಲಬಾಷೆಯಲ್ಲಿ ಹೈನಾ ಎಂದೇ ಕರೆಸಿಕೊಳ್ಳುವ ಕತ್ತೆಕಿರುಬಗಳನ್ನು ಅವುಗಳ ವಂಶಾಭಿವೃದ್ದಿ ಹಿನ್ನೆಲೆಯಲ್ಲಿ ತರಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮುಕುಂದ ಚಂದ್ರ ತಿಳಿಸಿದ್ದಾರೆ.


ನಿನ್ನೆ ಸಂಜೆ ಒಂದು ಗಂಡು, ಮೂರು ಹೆಣ್ಣು ಸೇರಿದಂತೆ ನಾಲ್ಕು ಕತ್ತೆ ಕಿರುಬಗಳನ್ನು ಶಿವಮೊಗ್ಗಕ್ಕೆ ಕರೆತರಲಾಯಿತು.
ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿವೆ.
ವನ್ಯಜೀವಿ ವೈದ್ಯ ಡಾ.ಮುರಳಿಮನೋಹರ್ ನೇತೃತ್ವದ ತಂಡ ಈ ಕತ್ತೆ ಕಿರುಬಗಳನ್ನು ಮೃಗಾಲಯಕ್ಕೆ ಕರೆತಂದಿದೆ.
ಈ ಮೊದಲು ಹುಲಿ-ಸಿಂಹಧಾಮದಲ್ಲಿಎರಡು ಜೋಡಿ ಕತ್ತೆ ಕಿರುಬ ಇದ್ದವು. ಅದರಲ್ಲಿ ಒಂದು ಹೆಣ್ಷು ಸಾವಿಗೀಡಾಗಿದೆ. ಮೂರು ಗಂಡು ಪ್ರಾಣಿಗಳು ಮಾತ್ರ ಇದೆ.
ಇದರಿಂದ ಅವುಗಳ ವಂಶಾಭಿವೃದ್ಧಿಗೆ ತೊಂದರೆ ಆಗಿತ್ತು.


’ಪ್ರಾಣಿಗಳ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ ಈ ನಾಲ್ಕು ಕತ್ತೆಕಿರುಬಗಳನ್ನು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ಡಾ.ನಿರ್ದೇಶಕ ಮುಕುಂದಚಂದ್ರ ತಿಳಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!