ಶಿವಮೊಗ್ಗ: ಶಿವಮೊಗ್ಗ ತಾಲೂಕು ಸಕ್ಕರೆ ಕಾರ್ಖಾನೆ ರೈತರು ಮತ್ತು ಕಾರ್ಮಿಕರ, ನಿವಾಸಿಗಳ ಭೂ ಹಕ್ಕು ಹೋರಾಟ ಸಮಿತಿಯಿಂದ ಫೆ.29 ರಂದು ಬೆಳಗ್ಗೆ 10 ಗಂಟೆಗೆ  ಮಲವಗೊಪ್ಪದಿಂದ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.
ಮಲವಗೊಪ್ಪ, ತೊಪ್ಪಿನಘಟ್ಟ,ಹರಿಗೆ, ನಿದಿಗೆ, ಹಕ್ಕಿಪಿಕ್ಕಿ ಕ್ಯಾಂಪ್‌ , ಚಿಕ್ಕಮರಡಿ ಸೇರಿದಂತೆ

15 ಗ್ರಾಮಗಳಲ್ಲಿ ನಾಲ್ಕು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಗೆ ಕೆಲ ವ್ಯಕ್ತಿಗಳು ಕಾರ್ಖಾನೆ ಮಾಲೀಕರೆಂದು ಹೇಳಿ ಹೆದರಿಸುತ್ತಿದ್ದಾರೆ. ಸ್ವಾಧೀನದಲ್ಲಿರುವ ರೈತರು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೆಲವರಿಗೆ ಹಕ್ಕು ಪತ್ರ ಇವೆ. ಆದರೆ ಈಗ ಕಾರ್ಖಾನೆ ಮಾಲೀಕರೆಂದು ಹೇಳಿಕೊಂಡಿರುವ ವ್ಯಕ್ತಿಗಳು

ಗೂಂಡಾಗಿರಿ ಮಾಡಿ ರೈತರನ್ನು ಎಬ್ಬಿಸಲು ಯತ್ನಿಸುತಿದ್ದಾರೆ. ಈ ರೈತರಿಗೆ ರಕ್ಷಣೆ ಕೋರಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಬಿ.ಕೃಷ್ಣಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!