ಗಜೇಂದ್ರಸ್ವಾಮಿ
ಶಿವಮೊಗ್ಗ, ಫೆ. 19:
ದೇಶವಿದೇಶದಲ್ಲಿ ಅತ್ಯಂತ ಯಶಸ್ವಿಯಾದ ತರಳುಬಾಳು ಹುಣ್ಣಿಮೆ ಮಹೋತ್ಸವ ಈ ಬಾರಿ ಕೇವಲ ಮೂರು ದಿನಕ್ಕೆ ಸೀಮಿತವಾಗಿದೆ ಎಂದು ಸಿರಿಗೆರೆ ಬೃಹನ್ ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕೈಗೊಂಡ ಈ ಆಚರಣೆ ದಿನ ನಿರ್ಧಾರಕ್ಕೆ ಭಕ್ತರು ಅಸ್ತು ಅಂದಿದ್ದಾರೆ. ಪ್ರತಿ ವರ್ಷ 10 ರಿಂದ 11 ದಿನಗಳ ಕಾಲ ಇಡೀ ರಾಜ್ಯದ ಎಲ್ಲಾ ಕಡೆ ನಡೆಯುತ್ತಿದ್ದ ತರಳುಬಾಳು ಹುಣ್ಣಿಮೆ ಮಹೋತ್ಸವ ಕರೋನಾ ಬಂದ ನಂತರದಲ್ಲಿ ಒಂದಿಷ್ಟು ಸಮಯವನ್ನು ಕಡಿಮೆ ಮಾಡಿತ್ತು.
ಪ್ರಸಕ್ತ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಕೇವಲ ಮೂರು ದಿನಕ್ಕೆ ಸೀಮಿತವಾಗಿದ್ದು, ಬರುವ ಫೆಬ್ರವರಿ 22 ರಿಂದ 24ರ ವರೆಗೆ ಸಿರಿಗೆರೆಯಲ್ಲಿ ಸರಳವಾದ ತರಳಬಾಳು ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ.
ಎಂದಿನಂತೆ ವಿವಿಧ ಗಣ್ಯರು ಆಗಮಿಸಿದ್ದಾರೆ. ಶ್ರೀಗಳ ಹಿತವಚನ ನಿರಂತರವಾಗಿ ಸಿಗಲಿದೆ. ಅಂತೆಯೇ ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ದಾವಣಗೆರೆ ವಲಯದಲ್ಲಿ ತರಳಬಾಳು ಅಸೋಸಿಯೇಷನ್ ಗ್ರಾಮೀಣ ಕ್ರೀಡಾಕೂಟವನ್ನು ಇಂದು ಏರ್ಪಡಿಸಿದ್ದು ಅದರ ಯಶಸ್ಸಿನೊಂದಿಗೆ ಇಡೀ ಹುಣ್ಣಿಮೆಯ ಜವಾಬ್ದಾರಿಯ ಮುಖ್ಯ ಭಾಗವನ್ನು ಹೊತ್ತಿದೆ. ಮುಂದಿನ ವರ್ಷ ಎಂದಿನಂತೆ ನಿರಂತರವಾಗಿ 10 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆ ಈ ಬಾರೀ ಶ್ರೀಗಳು ವಿಶೇಷವಾಗಿ ಆರು ದೇಶ ಕಾದು ಹುತಾತ್ಮರಾದ ರೈತರ ಕುಟುಂಬಗಳಿಗೆ ಅಭಿನಂಧಿಸುವ ಜೊತೆ ತಲಾ ಒಂದು ಲಕ್ಷ ರೂ ನಗದು ನೀಡಲಿದ್ದಾರೆ.