ಶಿವಮೊಗ್ಗ : ಫೆ. 06:
ನಿತ್ಯ ರೈಲ್ವೆ ಹಾಗೂ ಬಸ್ ನಿಲ್ದಾಣದಿಂದ ತಮ್ಮ ಮನೆಗೆ ಬರಲು ಆಟೋ ಕೇಳಿದರೆ ಮನಸೋ ಇಚ್ಚೆ ರೊಕ್ಕ ಕೇಳುತ್ತಿದ್ದ ಕೆಲ ಹುಳಿ ಮನಸಿನ ಚಾಲಕರಿಗೆ ಈಗಿನ ನಿಯಮ ಜಾರಿಯಾದರೆ ಯತೇಚ್ಚ ವಸೂಲಿ ಕನಸು ಭಗ್ನವಾಗುತ್ತೆ. ಜನ ನೆಮ್ಮದಿಯಾಗಿ ಗೂಡು ಸೇರಿಕೊಳ್ತಾರೆ.


ಅದೂ ರಾತ್ರಿ ಇಲ್ಲವೇ ಬೆಳಗಿನ ಜಾವ ರೈಲು ಹಾಗೂ ಬಸ್ ನಲ್ಲಿ ಒಬ್ಬರಿಗಿಂತ ಒಬ್ಬರು ಎಂಬಂತೆ ಮನಸೋ ಇಚ್ಚೆ ವಸೂಲಿ ಮಾಡುತ್ತಿದ್ದರೆಂಬ ಆರೋಪ ಸಾಕಷ್ಟು ಕೇಳಿ ಬಂದಿದ್ದವು.
ರೈಲ್ವೆ ನಿಲ್ದಾಣದಿಂದ ಉಷಾ ನರ್ಸಿಂಗ್ ಹೊಂ ಬಳಿ ಬರಲು ಇನ್ನೂರೈವತ್ತು ರೂ ಕೇಳಿ ಇಂಜಿನಿಯರ್ ಒಬ್ಬರಿಂದ ನಾಲ್ವರು ಆಟೋದವರು ಛೀ ಮಾರಿ ಹಾಕಿಸಿಕೊಂಡದ್ದನ್ನು ನಿಮ್ಮ ತುಂಗಾತರಂಗ ಸವಿಸ್ತಾರವಾದ ವರದಿ ಮಾಡಿತ್ತು.


ಈಗೊಂದು ಜನರಿಗೆ ರಿಲ್ಯಾಕ್ಸ್ ಹೇಳುವ ಕೆಲಸಕ್ಕೆ ಸಾರಿಗೆ ಇಲಾಖೆ ತೀರ್ಮಾನಿಸಿದೆ.
ಹಿಂದೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಿದಂತೆ ಶಿವಮೊಗ್ಗ ನಗರದ ರೈಲ್ವೇ ನಿಲ್ದಾಣ ಮತ್ತು ಪ್ರಮುಖ ಬಸ್ ನಿಲ್ದಾಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆವರಣದಲ್ಲಿ ಆಟೋರಿಕ್ಷಾ ಪ್ರೀ-ಪೇಯ್ಡ್ ಕೌಂಟರ್‍ಗಳನ್ನು ತೆರೆಯಲು ಸಾರ್ವಜನಿಕ ಸೇವೆ ಒದಗಿಸಲು ಜಿಎಸ್‍ಟಿ/ಐಟಿ ನಂ. ಹೊಂದಿರುವ ನೊಂದಾಯಿತ ಸಂಸ್ಥೆಯವರು ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯವರನ್ನು ಸಂಪರ್ಕಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222209 ಸಂಪರ್ಕಿಸುವುದು.

By admin

ನಿಮ್ಮದೊಂದು ಉತ್ತರ

error: Content is protected !!