ಶಿವಮೊಗ್ಗ,ಫೆ.02
ಶಿವಮೊಗ್ಗ ತಹಸಿಲ್ದಾರಾಗಿ ಕರ್ತವ್ಯ ನಿರ್ವಹಿಸಿದ ಕೇವಲ ಒಂದು ವರ್ಷದಲ್ಲಿ ಜನಾನುರಾಗಿಯಾಗಿದ್ದ, ಪ್ರಸ್ತುತ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಬಿ.ಎನ್. ಗಿರೀಶ್ ಅವರು ಮತ್ತೆ ಶಿವಮೊಗ್ಗ ತಹಸಿಲ್ದಾರಾಗಿ ವರ್ಗಾವಣೆಯಾಗಿದ್ದಾರೆ.
ಶಿವಮೊಗ್ಗ ನಗರ ಸೇರಿದಂತೆ ಇಡೀ ವಿಶ್ವ ಕೊರೋನಾ ದಾಳಿಯಲ್ಲಿ ನಲುಗಿದ್ದಾಗ ಪೊಲೀಸರಂತೆ ಮುಂದೆ ನಿಂತು ಜನರ ಆಗು ಹೋಗು, ಬೇಡಿಕೆಗಳನ್ನು ಪೂರೈಸಿದ್ದ ಅಧಿಕಾರಿ ಗಿರೀಶ್ ಎಂದರೆ ತಪ್ಪಾಗಲಿಕ್ಕಿಲ್ಲ.
ವಿಶೇಷವೆಂದರೆ ಮಾರುವೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಹತ್ತಿಕ್ಕಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೆಡ್ಡು ಹೊಡೆದು ಅಕ್ರಮ ಮರಳು ಕಲ್ಲು ದಂಧೆ ಹತ್ತಿಕ್ಕಿದ ಅಧಿಕಾರಿ ಅವರು.
ರಾಜ್ಯದ ಎಲ್ಲಾ ತಾಲ್ಲೂಕುಗಳ ಕಾರ್ಯಕ್ರಮಗಳ ನಡುವೆ ವಿಧವಾ, ವೃದ್ದಾಪ್ಯ, ಅಂಗವಿಕಲದಂತಹ ಯೋಜನೆಗಳ ಅನುಷ್ಟಾನದಲ್ಲಿ ಗಿರೀಶ್ ಪಾತ್ರ ರಾಜ್ಯದಲ್ಲಿ ಮೆಚ್ಚುಗೆ ಗಳಿಸಿತ್ತು. ಮೊದಲ ಸ್ಥಾನ ಪಡೆದಿತ್ತು.
ಅಂತೆಯೇ ಈಗಿದ್ದ ತಹಶಿಲ್ದಾರರಾದ ನಾಗರಾಜ್ ಅವರನ್ನು ಹಾವೇರಿಗೆ ವರ್ಗಾಯಿಸಲಾಗಿದೆ. ನಾಗರಾಜ್ ಸಹ ಕರ್ತವ್ಯದ ವಿಷಯದಲ್ಲಿ ಸದಾ ಕ್ರಿಯಾಶೀಲರಾಗಿದ್ದರು.
ಅಂತೆಯೇ, ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಅವರ ನಿರಂತರ ಶ್ರಮಕ್ಕೆ ಈಗೊಂದು ಹೊಸ ಬದಲಾವಣೆ ಬಂದಿದೆ.