ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ ವಾಸಿ ಹನುಂತ ನಾಯ್ಕ್ ರವರು ದಿನಾಂಕ 29-01-2024 ರಂದು ಬೆಳಿಗ್ಗೆ ಮನೆಗೆ ಬೀಗವನ್ನು ಹಾಕಿ , ಬೀಗದ ಕೀಯನ್ನು ಮನೆಯ ಮೇಲ್ಗಡೆ ಮೊಳೆಯಲ್ಲಿ ನೇತು ಹಾಕಿ ಶಿಕಾರಿಪುರದ ಆಸ್ಪತ್ರೆಗೆ ಹೋಗಿದ್ದ ಸಮಯದಲ್ಲಿ ಮನೆಯ ಕೀಯನ್ನು ಬಳಸಿ ಬೀರುವುನಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶಿಕಾರಿಪುರ ಗ್ರಾಮಾಂತರ ಪೊಲಿಸ್ ಠಾಣೆ ಗುನ್ನೆ ಸಂಖ್ಯೆ 0031/2024 ಕಲಂ: 454, 380 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ನಗದು ಹಣದ ಪತ್ತೆಗಾಗಿ ಮಿಥುನ್ ಕುಮಾರ್ ಜಿ ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮಾರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ,ಶಿವಾನಂದ ಎಂ ಮದರಖಂಡಿ, ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಆರ್.ಆರ್. ಪಾಟೀಲ್,* ಪೊಲೀಸ್ ನಿರೀಕ್ಷಕರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆರವರ ನೇತೃತ್ವದಲ್ಲಿ, ಎನ್ ವೈ ಒಲೇಕರ್ ಪಿ.ಎಸ್.ಐ, ಮಂಜುನಾಥ .ಕೆ, ಪಿ.ಎಸ್.ಐ , ತೋಟಪ್ಪ ಎ.ಎಸ್.ಐ, ನಾಗರಾಜ, ಹೆಚ್.ಸಿ, ಲಕ್ಷ್ಮಿಭಾಯಿ, ಮ.ಹೆಚ್.ಸಿ, ಸಿ.ಪಿ.ಸಿಗಳಾದ ಪ್ರಶಾಂತ್, ಹಜರತ್ ಅಲಿ, ಶಂಕರ ನಾಯ್ಕ್ ಮತ್ತು ಎ.ಪಿ.ಸಿ ವಿಜಯಕುಮಾರ್ ರವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಸದರಿ ತನಿಖಾ ತಂಡವು ಪ್ರಕರಣ ದಾಖಲಾದ ಕೇವಲ ನಾಲ್ಕು ಗಂಟೆಯ ಒಳಗಾಗಿ ಪ್ರಕರಣದ ಆರೋಪಿ ಆಕಾಶ್ 18 ವರ್ಷ, ಚೀಲೂರು ಕೆಂಗಟ್ಟೆ ಗ್ರಾಮ ನ್ಯಾಮತಿ, ದಾವಣಗೆರೆ ಜಿಲ್ಲೆ ದಸ್ತಗಿರಿ ಮಾಡಿ, ಆತನಿಂದ ಕಳ್ಳತನ ಮಾಡಿದ 2,00,000/- ರೂ ( ಎರಡು ಲಕ್ಷ ರೂಪಾಯಿ ) ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ, ಅಭಿನಂದಿಸಿರುತ್ತಾರೆ.