ಶಿವಮೊಗ್ಗ, ಜ.11:
ಅತ್ಯಂತ ಕಡಿಮೆ ಅವಧಿಯಲ್ಲಿ ನುಡಿದಂತೆ ನಡೆದ ಕರ್ನಾಟಕ ರಾಜ್ಯ ಸರ್ಕಾರ ಈಗ ತನ್ನ ಐದನೇ ಗ್ಯಾರೆಂಟಿಯಾದ ಯುವನಿಧಿ ಅನುಷ್ಟಾನಕ್ಕೆ ನಾಳೆ ಶಿವಮೊಗ್ಗದಲ್ಲಿ ಮುಂದಾಗಲಿದ್ದು ಇದರಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಹೆಚ್ಚು ಜನ ಭಾಗವಹಿಸಲಿದ್ದಾರೆ. ವಿಶೇಷವಾಗಿ ಯುವ ಸಮೋಹ ಇದರಲ್ಲಿ ಸಕ್ರಿಯವಾಗಿ ತೊಡಗಲಿದೆ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ ಇಂದಿಲ್ಲಿ ತಿಳಿಸಿದರು.
ಅವರು ಇಂದು ಮಧ್ಯಾಹ್ನ ಫ್ರೀಡಂ ಪಾರ್ಕ್ ನಲ್ಲಿ ಸಿದ್ಧವಾಗಿರುವ ಬೃಹತ್ ಕಾರ್ಯಕ್ರಮದ ವೇದಿಕೆಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಕೈಗೆ ಹಣ ತಲುಪಿಸುವ ಮೂಲಕ ಭ್ರಷ್ಟಾಚಾರ ಎಲ್ಲಿಯೂ ನಡೆಯದಂತೆ ನೋಡಿಕೊಂಡಿರುವುದು ನಮ್ಮ ಸರ್ಕಾರದ ಹಿರಿಮೆಯ ಸಂಗತಿ. ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಎಲ್ಲ ಸಚಿವ ಸಂಪುಟವನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ನಾವು ನೀಡುವ ಗ್ಯಾರಂಟಿ ಬಗ್ಗೆ ಟೀಕೆ ವ್ಯಕ್ತಪಡಿಸುವ ವ್ಯಕ್ತಪಡಿಸಿರುವ ಬಿಜೆಪಿಯವರಲ್ಲಿನವರೇ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ ಎಂಬುದು ದುರಂತವಲ್ಲವೇ? ರಾಮಮಂದಿರದ ವಿಷಯ ತಿಳಿದುಕೊಂಡು ಸುಮ್ಮನೆ ಕಿತ್ತಾಡುವ ನೀವು ಬರ ಪರಿಹಾರದ ಹಣವನ್ನು ಕೇಂದ್ರದಿಂದ ತರಿಸುವ ನಿಟ್ಟಿನಲ್ಲಿ ಯಾಕೆ ಪ್ರಯತ್ನಿಸುತ್ತಿಲ್ಲ. ನೀವು ಅತಿವೃಷ್ಟಿ ಆಗಿದ್ದಾಗ ಮನೆ ಕಟ್ಟಲು ಹಣ ಕೊಟ್ಟಿದ್ದೀರಾ? ನಿಮ್ಮ ಚೌಕಟ್ಟನ್ನು ನೋಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಪ್ರಮುಖರಾದ ಡಾ.ಮಂಜುನಾಥಗೌಡ, ಎಂ. ಶ್ರೀಕಾಂತ್, ಯೋಗೀಶ್, ದೇವೇಂದ್ರಪ್ಪ, ವಿಜಯಕುಮಾರ್ ಡಾ. ಶ್ರೀನಿವಾಸ್, ರವಿ, ಕಾಶಿ ವಿಶ್ವನಾಥ್, ಇಸ್ಮಾಯಿಲ್, ಶಾಂತವೀರ ನಾಯಕ್, ರಮೇಶ್, ರಂಗನಾಥ್ ಹಾಗೂ ಇತರರು ಉಪಸ್ಥಿತರಿದ್ದರು
ಈಶ್ವರಪ್ಪ ಹಾಗೂ ವಿಜಯೇಂದ್ರರಿಗೆ ಟಾಂಗ್ ಕೊಟ್ಟ ಬೀಳೂರು!
ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ದಿನನಿತ್ಯ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ, ಹೋರಾಟದಲ್ಲಿ ಒಂದೂ ಕೇಸ್ ಹಾಕಿಸಿಕೊಳ್ಳದ ಈ ಮನುಷ್ಯ ತನ್ನ ಮಗನಿಗೆ ವಿಜೇಂದ್ರ ಹಾವೇರಿಯಿಂದ ಟಿಕೆಟ್ ನೀಡುತ್ತಾರೆ ಎಂಬ ಭರವಸೆ ಹೊಂದಿದ್ದಾರೆ. ಅಲ್ಲಿ ಟಿಕೆಟ್ ಕೈತಪ್ಪಲ್ಲಿ ಆಮೇಲೆ ನೋಡಿ ಇದೇ ಈಶ್ವರಪ್ಪ ಬುಸ್ ನಾಗಪ್ಪ ಆಗುತ್ತಾರೆ. ಇಲ್ಲವೇ ಯತ್ನಾಳ್ ಆಗುತ್ತಾರೆ ಎಂದರು.
ಅಪ್ಪನ ಹೆಸರೇಳಿಕೊಂಡು ಅಧ್ಯಕ್ಷಗಿರಿ ಪಡೆದ ವಿಜಯೇಂದ್ರ ಅವರು ಹರಿಪ್ರಸಾದ್ ಅವರಿಗೆ ಮಂಪರ್ ಪರೀಕ್ಷೆ ಮಾಡಬೇಕು ಎನ್ನುತ್ತಿದ್ದಾರೆ. 40,000 ಕೋಟಿ ಅನ್ಯಾಯದ ಬಗ್ಗೆ ನಿಮಗೆ ಹಾಗೂ ನಿಮ್ಮ ಅಪ್ಪನಿಗೆ ಮಂಪರ್ ಪರೀಕ್ಷೆ ಮಾಡಬೇಕಾ ಎಂದು ಪ್ರಶ್ನಿಸಿದರು.