ಶಿವಮೊಗ್ಗ : ತುಂಗಾ ತರಂಗ ದಿನಪತ್ರಿಕೆಯಲ್ಲಿ ಜನವರಿ 03 ರಂದು ಶಿವಮೊಗ್ಗದಲ್ಲಿ ರಾಬರಿಗೆ ಕಾಯುತ್ತಿದ್ದಾರೆ ಎಂಬ ಹೆಡ್ ಲೈನ್ ನಲ್ಲಿ ಶಿವಮೊಗ್ಗದ ಹೊರವಲಯದಲ್ಲಿ ಇತ್ತಿಚೇಗೆ ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಹೆಚ್ಚಾಗಿ ರಾಬರಿಗಳು ನಡೆಯುತ್ತಿದ್ದು, ಇದರ ಸಾರ್ವಜನಿಕರು ಪತ್ರಿಕೆಯ ಮೂಲಕ ಪೊಲೀಸ್ ಇಲಾಖೆಯಿಂದ ಬಿಟ್ ವ್ಯವಸ್ಥೆ ಹೆಚ್ಚಿಸಲು ಆಗ್ರಹಿಸಿದ್ದರು.


ಹೌದು.. ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಎರಡು ಕಡೆ ಚಾಕು ತೋರಿಸಿ ಎರಡು ಕಡೆ ರಾಬರಿ ಮಾಡಿರುವ ಘಟನೆ ವರದಿಯಾಗಿದೆ.


ಘಟನೆ 1 : ತುಂಗನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಬರುವ ಸಾಗರದ ರಸ್ತೆಯ ಮಲ್ಲಿಗೇನ ಹಳ್ಳಿಯ ಬಳಿ ಹಿಂಬದಿ ಬೈಕ್ ನಿಂದ ಬಂದ ಇಬ್ಬರು ಬೈಕ್ ನಿಲ್ಸು ಎಂದು ಜೋರಾಗಿ ಕೂಗಿ ಅಡ್ಡ ಬಂದು ಚಿನ್ನದ ಸರ, ಮೊಬೈಲ್ ಮತ್ತು ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕೋಟೆಗಂಗೂರಿನ ನಿವಾಸಿ ಸುನೀಲ್ ಭಟ್ ಶಿವಮೊಗ್ಗದ ನ್ಯೂಮಂಡ್ಲಿ ಬಳಿಯ ಚೌಡೇಶ್ವರಿ ದೇವಸ್ಥಾನಕ್ಕೆ ಸ್ನೇಹಿತ ವಿನಯ್ ಜೊತೆ ಪೂಜೆಗೆ ಬಂದಿದ್ದು ಪೂಜೆ ಮುಗಿಸಿಕೊಂಡು ರಾತ್ರಿ 8-30 ರ ಸಮಯದಲ್ಲಿ ಸಾಗರ ರಸ್ತೆಯ ಬಳಿ ಹೋಗುವಾಗ ಹಿಂಬದಿಯಿಂದ ಬಂದ ಇಬ್ಬರು ಅಪರಿಚಿತರು ಗಾಡಿ ನಿಲ್ಲಿಸು ಎಂದು ಜೋರಾಗಿ ಕೂಗಿದ್ದು, ಅರ್ಚಕರ ವಾಹನ ನಿಧಾನವಾದ ಪರಿಣಾಮ ಅವರ ವಾಹನಕ್ಕೆ ಅಡ್ಡ ನಿಲ್ಲಿಸಿದ ಅಪರಿಚಿತ ಬೈಕ್ ಸವಾರನೊಬ್ಬ ಬೈಕ್ ನಿಂದ ಅರ್ಚಕರನ್ನ ಮತ್ತು ಸ್ನೇಹಿತ ವಿನಯ್ ಗೆ ಡ್ರಾಗರ್ ತೋರಿಸಿ ಬೀಳಿಸಿದ್ದಾನೆ. ಕೆಳಗೆ ಬಿದ್ದ ಸುನೀಲ್ ಭಟ್ ರವರ ಕುತ್ತಿಗೆಯಲ್ಲಿದ್ದ 7 ಗ್ರಾಂ ಚಿನ್ಬದ ಸರ, ಮೊಬೈಲ್ ಕಿತ್ತುಕೊಂಡಿದ್ದು,
ಹಿಂಬದಿಯಲ್ಲಿದ್ದ ವಿನಯ್ ಕೆಳಗೆ ಬಿದ್ದ ಪರಿಣಾಮ ಅವರ ಮೊಬೈಲ್ ಚರಂಡಿಗೆ ಬಿದ್ದಿದ್ದು,. ಆತನಿಗೆ ಚಾಕು ತೋರಿಸಿ ಜೇಬಲ್ಲಿದ್ದ ಹಣ ಕೊಡು ಎಂದು 1500 ರೂ ಹಣ ಕಿತ್ತುಕೊಂಡಿದ್ದಾನೆ. ಈ ವೇಳೆ ಸುನೀಲ್ ಭಟ್ ಪೊಲೀಸ್ ಪೊಲೀಸ್ ಎಂದು ಕೂಗಿದ್ದಾರೆ.

ಘಟನೆ 2 :
ಪರಮೇಶ್ವರ್ ಎಂಬ ವ್ಯಕ್ತಿ ಕೊನಗವಳ್ಳಿ ಮತ್ತು ಹಿಟ್ಟೂರು ರಸ್ತೆಯ ಬಳಿ ಮೊಬೈಲ್ ನಲ್ಲಿ ಮಾತನಾಡುವ ವೇಳೆ ಹಿಟ್ಟೂರು ರಸ್ತೆಯಿಂದ ಬಂದ ಅಪರಿಚಿತರ ಬೈಕ್ ಗೆಜ್ಜೇನಹಳ್ಳಿಯ ರಸ್ತೆ ಮಾರ್ಗವನ್ನು ಕೇಳಿದೆ. ಇದ್ದಕ್ಕಿದ್ದಂತೆ ಬೈಕ್ ನಿಂದ ಇಳಿದು ಬಂದ ಅಪರಿಚಿತ ಪರಮೇಶ್ವರಪ್ಪನವರ ಬಳಿ ಇದ್ದ ಮೊಬೈಲ್ ಮತ್ತು 15300‌ ಹಣ ಮತ್ತು ಮೊಬೈಲ್ ಕಿತ್ತುಕೊಂಡು‌ ಪರಾರಿಯಾಗಿದ್ದಾರೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!