ಶಿವಮೊಗ್ಗ: ಶಿಮುಲ್ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ) ರೈತರಿಗೆ ಕೊಡುವ ಹಾಲಿನ (ಖರೀದಿ ದರ) ದರವನ್ನು 2 ರೂ. ಇಳಿಸಿದೆ.
ರಾಜ್ಯ ಸರಕಾರ ಈಚೆಗೆ 3 ರೂ. ಹಾಲಿನ ದರ ಏರಿಕೆ ಮಾಡಿದ್ದರೂ ಅಷ್ಟೂ ಹಣವನ್ನು ರೈತರಿಗೆ ಕೊಡಲು ತಾಕೀತು ಮಾಡಿತ್ತು.
ಹಾಲಿನ ಉತ್ಪಾದನೆಗೂ ಮಾರಾಟಕ್ಕೂ ತಾಳೆಯಾಗದ ಕಾರಣ ಒಕ್ಕೂಟ ನಷ್ಟದ ಹಾದಿಗೆ ಹೊರಳಿತ್ತು.
ಏಪ್ರಿಲ್‌ನಿಂದ ನವೆಂಬರ್ ಅಂತ್ಯದವರೆಗೆ ಶಿಮುಲ್ 26.89 ಕೋಟಿ ರೂ. ನಷ್ಟದಲ್ಲಿದೆ. ತಿಂಗಳ ಹಿಂದೆ 1.65 ರೂ. ಇಳಿಸಿದ್ದ ಒಕ್ಕೂಟ ಈಗ ಮತ್ತೆ 2 ರೂ. ಇಳಿಸಿದೆ. ರೈತರಿಗೆ ಇನ್ಮುಂದೆ ಪ್ರತಿ ಲೀಟರ ಹಾಲಿಗೆ 33.11 ರೂ. ಸಿಗಲಿದೆ.