ಶಿವಮೊಗ್ಗ: ರಾಜ್ಯದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಇಂದು ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಹಿನ್ನಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದೇ ಚುನಾವಣೆ ನಡೆದರೂ ವಿಕೇಂದ್ರೀಕರಣ ನೇತೃತ್ವದಲ್ಲಿ 130 ಸ್ಥಾನ ಗೆಲ್ಲುವ ವಾತಾವರಣ ನಿರ್ಮಾಣವಾಗಲಿದೆ. ಯಾವಾಗಲೇ ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಬರಲಿದೆ. ಬಿ.ವೈ.ವಿ. ಬೆಂಬಲಸಬೇಕು. ಲೊಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಿಸುವಂತೆ ಮಾನವಿ ಮಾಡಿದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಜ್ಯದ ಸಾಕಷ್ಟು ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ಬಲ ಬಂದಿದೆ. ವಿಜಯೇಂದ್ರ ಆಯ್ಕೆಯಿಂದ ಮಿಂಚಿನ ಸಂಚಾರ ಉಂಟಾಗಿದೆ. ಕಾಂಗ್ರೆಸ್ ನವರು ಬಿಜೆಪಿಯಲ್ಲಿ ಲಿಂಗಾಯಿತರನ್ನು ತುಳಿಯುತ್ತಿದ್ದಾರೆ ಎಂದು ಬಿಂಬಿಸಲಾಗಿತ್ತು. ಈಗ ಅವರು ಏನು ಹೇಳುತ್ತಾರೆ. ವಿಜಯೇಂದ್ರ ಲಿಂಗಾಯತರ ನಾಯಕ ಅಲ್ಲ. ಇಡೀ ಹಿಂದೂ ಸಮಾಜದ ನಾಯಕ ಎಂದರು.
ಕರ್ನಾಟಕ ರಾಜ್ಯದ ದೇಶದ್ರೋಹಿ ಮುಸಲ್ಮಾರನ್ನು ವಿಜಯೇಂದ್ರ ನೇತೃತ್ವದಲ್ಲಿ ಸದೆ ಬಡಿಯುತ್ತೇವೆ. ಸಂವಿಧಾನ ಬಾಹಿರವಾದಂತಹ ಹೇಳಿಕೆಯನ್ನು ಜಮೀರ್ ಅಹಮ್ಮದ್ ನೀಡಿದ್ದಾರೆ. ನಾವು ಯು.ಟಿ.
ಖಾದರ್ ಅವರಿಗಲ್ಲ ಸಭಾಧ್ಯಕ್ಷ ಪೀಠಕ್ಕೆ ಬೆಲೆ ಕೊಡುತ್ತೇವೆ ಎಂದರು.
ಜಾತಿಯ ಕಳಂಕವನ್ನು ವಿಜಯೇಂದ್ರ ಅಂಟಿಸಿಕೊಳ್ಳದೆ ಯಡಿಯೂರಪ್ಪನವರನ್ನು ಮೀರಿಸಿ ಬೆಳೆಯುವಂತೆ ಆಶಿಸಿದ ಅವರು, ಹಿಂದಿನ ಚುನಾವಣೆಯಲ್ಲಿ ಜಾತಿಗಳನ್ನು ಎತ್ತಿಕಟ್ಟಿ ಚುನಾವಣೆ ಗೆಲ್ಲಲಾಗಿದೆ. ರಾಜ್ಯದ ಅಧ್ಯಕಕ್ಷನಾದ ಬಳಿಕ ಹಿರಿಯರಿಗೆ ಪೋನ್ ಮಾಡಿ ಸಹಕಾರ ನೀಡುವಂತೆ ಕೋರಿದ್ದೀರಿ ಇದಕ್ಕಾಗಿ ಅಭಿನಂದನೆ ಎಂದರು.
ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುವಷ್ಟು ಮಟ್ಟಿಗೆ ಪಕ್ಷ ಸಂಘಟನೆ ಮಾಡಬೇಕಿದೆ. ಕಾರ್ಯಕರ್ತರ ಪಡೆ ಹಾಗೂ ಯಡಿಯೂರಪ್ಪನವರ ಆಶೀರ್ವಾದ ಇದೆ ಎಂದರು.