ಶಿವಮೊಗ್ಗ, ನ.21:
ಇನ್ಮುಂದೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೊಸ ಕಳೆ ಬಂದಿದೆ. ಬದಲಾವಣೆಯ ಹಂತಗಳನ್ನು ಗಮನಿಸಿದಾಗ ವಾಯು ಯಾನದ ಲಾಭ ಶಿವ ಪಾಲಿಕೆ ವರವಾಗಿ ದಕ್ಕಿದೆ. ಇದಕ್ಕೊಸ್ಕರ ಶ್ರಮಿಸಿದವರಲ್ಲಿ ಮುಖ್ಯ ಕಾರಣಕರ್ತರಾದ ಸಂಸದ ಬಿ. ವೈ. ರಾಘವೇಂದ್ರ ಮುಖದಲ್ಲಿ ಹೂ ನಗೆ ಅರಳಿದೆ.


ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ, ಗೋವಾಗೆ ವಿಮಾನಯಾನ ಪ್ರಾರಂಭವಾಗಲಿದೆ. ನಾಳೆ ಸ್ಟಾರ್ ಏರ್ ಲೈನ್ಸ್ ಹೈದರಾಬಾದ್ ನಿಂದ. ಬೆಳಗ್ಗೆ 9:30 ಕ್ಕೆ ಹೊರಟು ಶಿವಮೊಗ್ಗಕ್ಕೆ 10:35 ಕ್ಕೆ ಆಗಮಿಸಲಿದೆ. ಹೈದರಬಾದ್ ಗೆ ಮಂಗಳವಾರ, ಬುಧವಾರ ಗುರುವಾರ ಹಾಗೂ ಶನಿವಾರ ಸೇವೆ ನೀಡಲಿದೆ.

ವವೀಡಿಯೋ ನೋಡಿ

https://youtu.be/Yh3R20Ksdkc?si=-sbWa12UCKcRlJ4uಲ
ಹೈದರಾಬಾದ್ ನಿಂದ ಶಿವಮೊಗ್ಗಕ್ಕೆ ಬಂದ ವಿಮಾನ/ ಸಂಸದರ ಮುಖದಲ್ಲಿ ಸಂತಸದ ನಗು- ತುಂಗಾತರಂಗ ವಿಡಿಯೊ ನೋಡಿ


ಶಿವಮೊಗ್ಗ ದಿಂದ ಗೋವಾಕ್ಕೆ:
ಶಿವಮೊಗ್ಗದಿಂದ 13.55 ಕ್ಕೆ ಹೊರಟು ಗೋವಾಕ್ಕೆ 14.45 ಕ್ಕೆ ಗೋವಾದಲ್ಲಿ ವಿಮಾನ ಇಳಿಯಲಿದೆ. ಶಿವಮೊಗ್ಗದಿಂದ ಗೋವಾಕ್ಕೆ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶನಿವಾರ ಸ್ಟಾರ್ ಏರ್ ಲೈನ್ಸ್ ತನ್ನ ಸೇವೆಯನ್ನು ನೀಡಲಿದೆ.


ಶಿವಮೊಗ್ಗ- ತಿರುಪತಿ ಸೇವೆ:
ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನ ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ. ಈ ಸೇವೆಯು ಮಂಗಳವಾರ, ಗುರುವಾರ ಹಾಗೂ ಶನಿವಾರ ಇರಲಿದೆ.
ಮಂಗಳವಾರ, ಗುರುವಾರ ಹಾಗೂ ಶನಿವಾರ ವಿಮಾನವು ಬೆಳಗ್ಗೆ 12.35 ಕ್ಕೆ ತಿರುಪತಿಯಿಂದ ಹೊರಟು ಶಿವಮೊಗ್ಗಕ್ಕೆ 13.40 ಕ್ಕೆ ಬರಲಿದೆ. ಬುಧವಾರ ಶಿವಮೊಗ್ಗದಿಂದ ವಿಮಾನ 13.:40 ಕ್ಕೆ ಹೊರಟ ವಿಮಾನವು ಮಧ್ಯಾಹ್ನ 14:35 ಕ್ಕೆ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 15:05 ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 15.:55 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.


ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಮತ್ತು ತಿರುಪತಿಗೆ ಮೂರು ಕಡೆ ವಿಮಾನ ಹಾರಾಟ ಆರಂಭವಾಗಿದೆ. ಮೂರು ಕಡೆ ಪ್ರಯಾಣಿಸಲು 1999 ರೂ. ನಿಗದಿ ಪಡಿಸಲಾಗಿದೆ. ಇಂದು ಹೈದರಾಬಾದ್ ನಿಂದ ಬಂದ ಸ್ಟಾರ್ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮಾಡಲಾಯಿತು. ಮತ್ತೆ ವಿಸಿಬಿಲಿಟಿ ಕಂಡ ಬಂದ ಕಾರಣ ಭದ್ರಾವತಿ ಸುತ್ತಿಕೊಂಡು ವಾಪಾಸ್ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದೆ.


ಈ ಸುಂದರ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ
ಸಂಸದ ಬಿ.ವೈ. ರಾಘವೇಂದ್ರ ಅವರು ಕಾಂಕ್ರಿಟ್ ಮ್ಯೂಸಿಯಂ ಆಗ್ತಾ ಇತ್ತು. ಉಡಾನ್ ಯೋಜನೆ ಅಡಿ ಈ ಗೋವಾ, ಹೈದ್ರಾಬಾದ್ ಮತ್ತು ತಿರುಪತಿ ವಿಮಾನ ಹಾರಾಟ ಪ್ರಾರಂಭವಾಗಿದೆ. 400 ಜನ ಪ್ರಯಾಣಿಕರು ಇಂದು ಒಂದೇ ದಿನ ಪ್ರಯಾಣದ ಲಾಭ ಪಡೆದಿದ್ದರೆ. 63 ಜನ ತಿರುಪತಿಗೆ, ಹೈದ್ರಾಬಾದ್ ನಿಂದ 63, ಶಿವಮೊಗ್ಗದಿಂದ 41 ಜನ ಹೋಗ್ತಾ ಇದ್ದಾರೆ. ಒಟ್ಟು 400 ಜನ ಸ್ಟಾರ್ ಏರ್ ಲೈನ್ಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.
ಈ ಮೊದಲು ಬೆಂಗಳೂರು ಮತ್ತು ಶಿವಮೊಗ್ಗದ ನಡುವೆ ಹಾರಾಡುತ್ತಿದ್ದಾರೆ. ಇಂಡಿಗೋದಲ್ಲಿ 78% ಜನ ಪ್ರಯಾಣಿಸಿದ್ದಾರೆ. ಮಧ್ಯಕರ್ನಾಟಕಕ್ಕೆ ಈ ವಿಮಾನ ನಿಲ್ದಾಣ ಉತ್ತಮವಾಗಿದ್ದು ಇದು ಅಮೂಲ್ಯ ಆಸ್ತಿಯಾಗಲಿದೆ ಎಂದರು.

ಇಂಡಿಗೋ ಮತ್ತು ಸ್ಟಾರ್ ಹಾರಾಟವಾಗುತ್ತಿದೆ. ಶಿವಮೊಗ್ಗದಿಂದ ದೆಹಲಿ, ಜೈಪುರ, ಚೆನೈ ಓಡಾಟ ಸದ್ಯದಲ್ಲೆ ಆರಂಭವಾಗಲಿದ್ದು, ಏರ್ ಇಂಡಿಯಾಗೆ ಟೆಂಡರ್ ಆಗಿದೆ.
ಸದ್ಯದಲ್ಲೇ ವಿಸಿಬಿಲಿಟಿ ಸಮಸ್ಯೆ ಬಗೆಹರಿಸಲಾಗುವುದು
ಬೆಂಗಳೂರಿನಿಂದ ಬಂದ ಇಂಡಿಗೋ ವಿಮಾನ ಶಿವಮೊಗ್ಗದಲ್ಲಿ ಮೂರು ಬಾರಿ ಲ್ಯಾಂಡಿಂಗ್ ಆಗದೆ ವಾಪಾಸಾಗಿರುವ ಉದಹರಣೆ ಇದೆ.

ಇದು ಶೀಘ್ರದಲ್ಲಿಯೇ ನಿವಾರಣೆ ಆಗಿಲಿದೆ. ಬಾಂಬ್ ನಿಗ್ರಹ ಉಪಕರಣವನ್ನು ವಿದೇಶದಲ್ಲಿಯೇ ಖರೀದಿಸಿ ಅಳವಡಿಸಲು ಪ್ರಸ್ತುತ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಕೆಎಸ್ಐಡಿಸಿ ತಂಡ ಉತ್ತಮ ಕೆಲಸ ಮಾಡಿದೆ ಎಂದು ರಾಘವೇಂದ್ರ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಶಾಸಕರಾದ ಚನ್ನಬಸಪ್ಪ, ರುದ್ರೇಗೌಡ, ಡಿಎಸ್ ಅರುಣ್ , ಪಾಲಿಕೆ ಮೇಯರ್ ಶಿವಕುಮಾರ್, ಉಪಮೇಯರ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!