ಸಾಗರ : ಇಲ್ಲಿನ ಅಬ್ಕಾರಿ ಇಲಾಖೆ ವತಿಯಿಂದ ವಿವಿಧ ಕಡೆ ದಾಳಿ ನಡೆಸಿ ನಾಲ್ಕು ಎನ್.ಡಿ.ಪಿ.ಎನ್. ಪ್ರಕರಣವನ್ನು ದಾಖಲಿಸಲಾಗಿದೆ.
ಅಕ್ರಮ ಗಾಂಜಾ ಸಾಗಾಣಿಕೆ ಮತ್ತು ಸೇವನೆಯಲ್ಲಿ ತೊಡಗಿದ್ದ ರಾಘವೇಂದ್ರ ಅಣಲೆಕೊಪ್ಪ,

ಸೈಯದ್ ಇಪ್ರಾದ್, ಸೈಯದ್ ಅಸ್ಲಾಂ, ಆರೀಫ್ ಎಂಬುವವರನ್ನು ವಶಕ್ಕೆ ಪಡೆದು ೬೦೦ ಗ್ರಾಂ ಒಣಗಾಂಜವನ್ನು ಜಪ್ತಿ ಮಾಡಲಾಗಿದೆ. ಅಬ್ಕಾರಿ ನಿರೀಕ್ಷಕ ಸಂದೀಪ್, ಉಪ ನಿರೀಕ್ಷಕ ಸಂತೋಷ್ ರೆಡ್ಡೇರ್, ಶಿವಪ್ರಸಾದ್,

ವಾಸವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ದೀಪಕ್, ಕನ್ನಯ್ಯ, ಮಹಾಬಲೇಶ್, ಅರುಣ್, ಗಣಪತಿ, ಮುದಾಸ್ಸಿರ್, ಪುಟ್ಟಪ್ಪ, ಸಚಿನ್ ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!