ರಂಗಾಯಣ ಪ್ರಸಕ್ತ ಸಾಲಿನಲ್ಲಿ ಸಿದ್ದಪಡಿಸಿರುವ ಎರಡು ಹೊಸ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಲು ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣದ ಸಹಕಾರದೊಂದಿಗೆ ನ.18 ರಂದು ‘ಮುಟ್ಟಿಸಿಕೊಂಡವನು’ ಮತ್ತು ನ.19 ರಂದು ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನವನ್ನು ಸುವರ್ಣ ಸಾಮಸ್ಕøತಿಕ ಭವನದಲ್ಲಿ ಆಯೋಜಿಸಲಾಗಿದೆ.
ಮುಟ್ಟಿಸಿಕೊಂಡವನು ನಾಟಕ ಪಿ.ಲಂಕೇಶ್ ಕಥೆಯಾಧಾರಿತವಾಗಿದ್ದು ರಂಗಾಯಣದ ಹಿರಿಯ ಕಲಾವಿದೆ ನಂದಿನಿ ಕೆ ಆರ್ ನಿರ್ದೇಶಿಸಿದ್ದಾರೆ. ಕಸಾಂದ್ರ ಮತ್ತು ಸತಿ ನಾಟಕ ಹೆಚ್.ಎಸ್.ಶಿವಪ್ರಕಾಶ್ ರವರು ರಚಿಸಿದ್ದು, ಮೊದಲ ಬಾರಿಗೆ ಎರಡು ನಾಕಟಗಳನ್ನು ಸೇರಿಸಿ ಪ್ರದರ್ಶಿಸುತ್ತಿರುವ ಹೊಸ ರಂಗಪ್ರಯೋಗ ಇದಾಗಿದೆ. ಈ ನಾಟಕವನ್ನು ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳರು ನಿರ್ದೇಶಿಸಿದ್ದಾರೆ.
ಟಿಕೆಟ್ ದರ ಒಂದು ನಾಟಕಕ್ಕೆ ಒಬ್ಬರಿಗೆ ರೂ. 100. ಟಿಕೆಟ್ಗಳನ್ನು ಮುಂಗಡವಾಗಿ ಖರೀದಿಸಲು ಅವಕಾಶವಿದ್ದು, ಟಿಕೆಟ್ಗಳಿಗಾಗಿ ರಂಗಾಯಣ, ಸುವರ್ಣ ಸಾಂಸ್ಕøತಿಕ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ದೂರವಾಣಿ ಸಂಖ್ಯೆ: 08182-256353 ಯನ್ನು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕುವೆಂಪು ರಂಗಮಂದಿರ, ಶಿವಮೊಗ್ಗ ದೂ.ಸಂ: 08182-223354 ನ್ನು ಸಂಪರ್ಕಿಸಬಹುದು ಎಂದು ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾ ಎ.ಸಿ ತಿಳಿಸಿದ್ದಾರೆ.