ಶಿವಮೊಗ್ಗ: ಭಾರತೀಯ ಜೆಸಿ ವಲಯ ೨೪ರ ವಾರ್ಷಿಕ ವಲಯ ಸಮ್ಮೇಳನ ಅನುಬಂಧವನ್ನು ನ.04-05, 2 ದಿನಗಳ ಕಾಲ ಸೋಮಿನಕೊಪ್ಪ ಮುಖ್ಯ ರಸ್ತೆಯ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಲಾಗಿದೆ ಎಂದು ಜೆಸಿಐ ಶಿವಮೊಗ್ಗ ವಿವೇಕ್‌ನ ಅಧ್ಯಕ್ಷ ಶ್ರೀಧರ್ ಹೆಗಡೆ ತಿಳಿಸಿದರು.


ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜೆಸಿಸ್‌ನ ವಲಯ ೨೪ರ ವಲಯ ಸಮ್ಮೇಳನ ಅನುಬಂಧ ಇದರ ಅತಿಥ್ಯವನ್ನು ಜೆಸಿಐ ಶಿವಮೊಗ್ಗ ವಹಿಸಲಿದ್ದು, ರಾಜ್ಯದ ೧೩ ಜಿಲ್ಲೆಗಳಿಂದ ೮೦೦ ಮಂದಿ ಜೇಸಿ ಪ್ರತಿನಿಧಿಗಳು, ಸದಸ್ಯರು ಭಾಗವಹಿಸಲಿದ್ದಾರೆ. ಅಂತರಾಷ್ಟ್ರೀಯ ಸಾಮಾಜಿಕ, ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೆಸಿಸ್ ಯುವ ನಾಯಕರನ್ನು ರೂಪಿಸುವ ಪರಿಣಾಮಕಾರಿ ತರಬೇತಿ ಸಂಸ್ಥೆಯಾಗಿದ್ದು, ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ಹೇಳಿದರು.


ನ.04ರ ಸಂಜೆ 5 ಗಂಟೆಗೆ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಳ ಹಾಬಜ್ಜ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಝೋನ್ 24ರ ವಲಯ ಅಧ್ಯಕ್ಷ ಜೆ.ಸಿ.ಅನುಷ್‌ಗೌಡ ವಹಿಸಲಿದ್ದಾರೆ. ಅತಿಥಿಗಳಾಗಿ ಸರ್ಜಿ ಫೌಂಡೇಷನ್‌ನ ಅಧ್ಯಕ್ಷ ಜೆ.ಸಿ. ಡಾ.ಧನಂಜಯ ಸರ್ಜಿ, ಭಾಷಣಕಾರರಾಗಿ ಪ್ರಾಧ್ಯಪ ಮತ್ತು ವಲಯ ತರಬೇತುದಾರ ಜೆಸಿ ಪ್ರಕಾಶ್ ಪೂಜಾರಿ, ಜೆಸಿ ರಾಷ್ಟ್ರೀಯ ಉಪಾಧ್ಯಕ್ಷೆ ರಜಿತ ಪೊಸರಾಲ, ನಿಕಟಪೂರ್ವ ವಲಯಾಧ್ಯಕ್ಷ ಜೆಸಿ ಶಿವಕುಮಾರ್ ನಾಯಕ್ ವಲಯ ಉಪಾಧ್ಯಕ್ಷ ಜೆಸಿ ಸೆನೆಟರ್ ಸತೀಶ್ಚಂದ್ರ ಉಪಸ್ಥಿತರಿರುವರು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಝೋನ್ ೨೪ರ ವಲಯ ಅಧ್ಯಕ್ಷ ಜೆ.ಸಿ.ಅನುಷ್‌ಗೌಡ, ಸಮ್ಮೇಳನದ ನಿರ್ದೇಶಕ ದೀಪು ಪಿ.ಎಸ್., ಪೂರ್ವಧ್ಯಕ್ಷ ಉದಯ್ ಕದಂಬ, ಚಂದ್ರಹಾಸ್ ಶೆಟ್ಟಿ, ಜೋಸೆಫ್ ಬಾಲರಾಜ್, ಬಿ.ಟಿ.ಭದ್ರೀಶ್, ಕಾಟನ್ ಜಗದೀಶ್, ಸುರೇಶ್, ನಾಗರಾಜ್ ಪರಿಸರ, ರಾಧಕೃಷ್ಣ, ವಿಶ್ವಾಸ್, ಸಂಜಯ್ ಮತ್ತಿತರರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9448256183, 9380653545, 7483162573

By admin

ನಿಮ್ಮದೊಂದು ಉತ್ತರ

error: Content is protected !!