ಶಿವಮೊಗ್ಗ, ಅ.೨೮:
ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿ ರುವ ಭೂಮಿ ಹುಣ್ಣಿಮೆಯನ್ನು ಇಂದು ರೈತರು ತಮ್ಮ ತಮ್ಮ ಹೊಲಗಳಲ್ಲಿ ಸಂತಸ ಸಂಭ್ರಮಗಳಿಂದ ಆಚರಿಸಿದರು.


ಇದೊಂದು ವಿಶಿಷ್ಟ ಸಂಪ್ರದಾಯದ ಹಬ್ಬವಾಗಿದ್ದು, ಭೂಮಿ ತಾಯಿಯೇ ರೈತಾಪಿ ಜನಗಳ ಜೀವನಾಡಿಯಾಗಿದೆ. ಭೂಮಿ ಹುಣ್ಣಿಮೆ ದಿನ ಭೂತಾಯಿತೆ ಸೀಮಂತ ಮಾಡುವುದು ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ತಮ್ಮ ತಮ್ಮ ಹೊಲಗಳಲ್ಲಿ ಭತ್ತದ ಬೆಳೆಗೋ. ಅಡಿಕೆ ಮರಕ್ಕೋ ಸೀರೆ ಉಡಿಸಿ ಉಡಿ ತುಂಬು ವುದು ವಾಡಿಕೆಯಾಗಿದೆ. ಜೊತೆಗೆ ಬುತ್ತಿ, ಚಿತ್ರಾನ್ನ, ಕಡುಬು, ಕಜ್ಜಾಯ ಮಾಡಿ ಭೂದೇವಿಗೆ ಅರ್ಪಿಸಿ ಸಂಭ್ರಮಿಸುತ್ತಾರೆ.


ಬಯಲುಸೀಮೆ ಮತ್ತು ಮಲೆನಾಡು ಎರಡೂ ಭಾಗಗಳಲ್ಲಿಯೂ ವಿಭಿನ್ನ ರೀತಿ ಯಲ್ಲಿ ರೈತರು ಭೂಮಿ ಹುಣ್ಣಿಮೆ ಆಚರಿಸು ತ್ತಾರೆ. ಭೂಮಣ್ಣಿ ಬುಟ್ಟಿ ತಯಾರಿಸಿ ಅದಕ್ಕೆ ಕೆಮ್ಮಣ್ಣು ಮತ್ತು ಶೇಡಿಯ ಚಿತ್ತಾರ ಬಿಡಿಸಿ ಬುಟ್ಟಿಯಲ್ಲಿ ಪೂಜಾ ಸಾಮಗ್ರಿ ತುಂಬಿ ಕೊಂಡು ಹೊಲಗಳಿಗೆ ಹೋಗಿ ವಿಶೇಷ ವಾಗಿ ಪೂಜೆ ಮಾಡುತ್ತಾರೆ. ನಂತರ ಚರಗ ತಮ್ಮ ಹೊಲದ ಸುತ್ತ ಬೀರುತ್ತಾರೆ.


ಮನೆಯವರೆಲ್ಲರೂ ಸಂತಸ ಸಂಭ್ರಮ ಗಳಿಂದ ಒಟ್ಟಾಗಿ ತೋಟದಲ್ಲೆ ಊಟ ಮಾಡುವ ದೃಶ್ಯ ಕೂಡ ಸುಂದರವಾಗಿರು ತ್ತದೆ. ಒಟ್ಟಾರೆ ಭೂಮಿಯನ್ನೆ ನಂಬಿರುವ ನಮ್ಮ ರೈತರು ಇದನ್ನು ಆರಾಧನೆಯಂತೆ ಮಾಡುತ್ತಾರೆ. ನೀರಾವರಿ ಪ್ರದೇಶದಲ್ಲಿ ರೈತರು ಒಂದಿಷ್ಟು ಸಮಾಧಾನವಾಗಿದ್ದರೆ ಬಯಲುಸೀಮೆಯಲ್ಲಿ ಮಾತ್ರ ರೈತರ ಗೋಳು ತಪ್ಪಿಲ್ಲ. ಬರಗಾಲ ಕಾಲಿಟ್ಟಿದ್ದು ಬೆಳೆಯೆಲ್ಲಾ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಭೂಮಿ ಹುಣ್ಣಿಮೆಯನ್ನು ಹೇಗೆ ಮಾಡುವುದು ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

By admin

ನಿಮ್ಮದೊಂದು ಉತ್ತರ

error: Content is protected !!