ಶಿವಮೊಗ್ಗ, ಅಕ್ಟೋಬರ್ ೨೫:

ಶಿವಮೊಗ್ಗದ ಗೋವಿಂದನ್ ನಾಯರ್ ಎಂಬುವವರು ತಮ್ಮ ವಿದ್ಯುತ್‌ಚಾಲಿತ ಟಾಟಾ ಕಾರಿನ ವಿಮೆಯನ್ನು ದಿ:೦೬/೧೧/೨೦೨೨ ರಿಂದ ದಿ:೦೫/೧೦/೨೦೨೩ರ ಅವಧಿಗೆ ಮೆಚೋಲಮಂಡಲಮ್ ಜನರಲ್ ಇನ್ಸೂರೆನ್ಸ್ ಕಂಪನಿಯಿಂದ ಪಡೆದಿದ್ದು, ದಿ: ೨೯/೧೧/೨೦೨೨ ರಂದು ತಮ್ಮ ಮನೆಯ ಪೋರ್ಟಿಕೋದಲ್ಲಿ ನಿಲ್ಲಿಸಿದ್ದ ಕಾರಿಗೆ ವಿದ್ಯುತ್ ಚಾರ್ಜಿಂಗ್‌ಗಾಗಿ ಚಾರ್ಜರ್‌ನ್ನು ಅಳವಡಿಸಿದ್ದು, ಆಕಸ್ಮಿಕದಿಂದ ವಿದ್ಯುತ್ ಚಾರ್ಜರ್‌ಗೆ ಹಾನಿಯಾಗಿದೆ. ಈ ಬಗ್ಗೆ ವಿಮೆ ಪರಿಹಾರ ಕೋರಿ ಕಾರಿನ ಮಾಲೀಕರು ಇನ್ಸೂರೆನ್ಸ್ ಕಂಪನಿಗೆ ಸಲ್ಲಿಸಿದ ಕ್ಲೈಂ ಅನ್ನು ಪುರಸ್ಕರಿಸದ ಕಾರಣ, ಇನ್ಸೂರೆನ್ಸ್ ಸಂಸ್ಥೆಯ ವಿರುದ್ಧ ಸೇವಾ ನ್ಯೂನ್ಯತೆ ಆರೋಪಿಸಿ ಮತ್ತು ಪರಿಹಾರ ಕೋರಿ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.


ಈ ಬಗ್ಗೆ ಎರಡೂ ಪಕ್ಷಗಾರರ ವಿಚಾರಣೆ ನಡೆಸಿದ ಆಯೋಗವು ಇನ್ಸೂರೆನ್ಸ್ ಕಂಪನಿ ವಿಮೆ ಪರಿಹಾರ ಒದಗಿಸುವಲ್ಲಿ ಸೇವಾ ನ್ಯೂನ್ಯತೆ ಎಸಗಿರುವುದು ದೃಢಪಟ್ಟ ಕಾರಣ ಮೆಟೋಲಮಂಡಲಮ್, ಜನರಲ್ ಇನ್ಸೂರೆನ್ಸ್ ಕಂಪನಿಯವರು ವಿದ್ಯುತ್ ಚಾರ್ಜರ್ ಬಾಬು ರೂ.೩೪,೮೪೦/-ಗಳನ್ನು ಆದೇಶ ದಿನಾಂಕದಿಂದ ೪೫ ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ ೭% ರಂತೆ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ರೂ.೧೦,೦೦೦/-ಗಳನ್ನು ದೂರುದಾರರಿಗೆ ಆದ ಮಾನಸಿಕ ಹಿಂಸೆಗಾಗಿ ಮತ್ತು ರೂ.೧೦,೦೦೦/-ಗಳನ್ನು ವ್ಯಾಜ್ಯ ವೆಚ್ಚವಾಗಿ ಆದೇಶ ದಿನಾಂಕದಿಂದ ೪೫ ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ ೧೦% ರಂತೆ ಬಡ್ಡಿಯೊಂದಿಗೆ ಪಾವತಿಸುವಂತೆ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ, ಬಿ. ಪಟ್ಟಣಶೆಟ್ಟಿ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಇವರನ್ನು ಒಳಗೊಂಡ ಪೀಠವು ಆದೇಶಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!