ಶಿವಮೊಗ್ಗ: ಶಿವಮೊಗ್ಗದ ಹೆಸರಾಂತ ಸಹ್ಯಾದ್ರಿ ರಂಗತರಂಗ ತಂಡವು ಕನ್ಯಾದಾನ ನಾಟಕ ಪ್ರದರ್ಶನ ಮಾಡಲಿದೆ. ನಾಟಕ ಅ. ೧೪, ೧೫ರಂದು ಡಿವಿಎಸ್ ರಂಗಮಂದಿರದಲ್ಲಿ ಸಂಜೆ ೬.೩೦ಕ್ಕೆ ಪ್ರದರ್ಶನಗೊಳ್ಳಲಿದೆ.


ಆಪ್ತರಂಗ ಸಜ್ಜಿಕೆಯಲ್ಲಿ ಪ್ರದರ್ಶನಗೊಳ್ಳಲಿರುವ ಈ ನಾಟಕಕ್ಕೆ ಉಚಿತ ಪ್ರವೇಶವಿದೆ. ಆದರೆ ಪಾಸ್ ಕಡ್ಡಾಯವಾಗಿದೆ. ಪಾಸ್‌ಗಳಿಗಾಗಿ ಸಂಪರ್ಕಿಸಿ: +೯೧ ೯೪೪೯೯ ೨೫೭೪೬


ವಿಜಯ ದೋಂಡೋಪಂತ್ ತೆಂಡೂಲ್ಕರ್ ಖ್ಯಾತ ಮರಾಠಿ ಚಿಂತಕ, ನಾಟಕಕಾರನ ಕೃತಿ ಕನ್ಯಾದಾನವಾಗಿದ್ದು, ತೆಂಡೂಲ್ಕರರ ನಾಟಕಗಳು ಸಮಾಜದ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಕಾರಣಕ್ಕಾಗಿ ಅನೇಕ ಚರ್ಚೆಗಳಿಗೆ ಅವಕಾಶ ನೀಡುತ್ತವೆ. ೧೯೮೩ರಲ್ಲಿ ಪ್ರಕಟವಾದ ’ಕನ್ಯಾದಾನ’ ಗಂಡು ಹೆಣ್ಣಿನ ಸಂಬಂಧ ಹಾಗು ಭಾರತೀಯ ಸಮಾಜದ ಜಾತಿ ಪದ್ಧತಿ ಬಗ್ಗೆ ವಿಶೇ? ಬೆಳಕು ಚೆಲ್ಲುವಂತದ್ದಾಗಿದೆ.
ನಾಟಕದ ನಿರ್ದೇಶವನ್ನು ನಮ್ಮ ನಡುವೆ ಇರುವ ಹಾಲಸ್ವಾಮಿ ಆರ್. ಎಸ್. ಮಾಡಿದ್ದು, ಇವರು


ಸಮಾಜ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಮೂರು ದಶಕಗಳಿಂದ ಶಿವಮೊಗ್ಗ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಇವರ ನಿರ್ದೇಶನದ ಪ್ರಮುಖ ನಾಟಕಗಳೆಂದರೆ ಗಾಂಧಿ ವರ್ಸಸ್ ಗೋಡ್ಸೆ, ದ್ವಂದ್ವ ದ್ವಾಪರ, ಯಾಪಿಲ್ಲು,

ಕುದುರೆ ಮೊಟ್ಟೆ. ನೀರೆಲ್ಲವೂ ತೀರ್ಥ(ಕುವೆಂಪು ನಾಟಕಗಳ ಕೊಲಾಜ್). ಇದಲ್ಲದೇ ಗಂಗಾಲಹರಿ ಹಾಗೂ ಓ. ಲಕ್ಷ್ಮಣ, ಹೆಳವನಕಟ್ಟೆ ಗಿರಿಯಮ್ಮ ನಾಟಕಗಳಿಗೆ ಸಹ ನಿರ್ದೇಶನ ಮಾಡಿದ್ದಾರೆ.


ಕನ್ಯಾದಾನ ನಾಟಕ ಪಾತ್ರವರ್ಗದಲ್ಲಿ ಡಾ. ಎಚ್.ಎಸ್. ನಾಗಭೂ?ಣ, ಮಧುರ ಬಿ.ಎಸ್., ಚೇತನ್ ಯನಹಳ್ಳಿ, ದೀಪಿಕ ಎಸ್., ಅರ್ಜುನ್ ಎಂ., ಶ್ರೀಕಂಠಪ್ರಸಾದ್, ಶ್ರೀನಿಧಿ ದೇಶಪಾಂಡೆ, ನಿರ್ಮಾಣ ನಿರ್ವಹಣೆ- ಶಂಕರ್ ಬೆಳಲಕಟ್ಟೆ, ಸಂಗೀತ: ರವಿ ಶಂಕರ್ ಹಚ್.ಕೆ., ಮೃದಂಗ: ಕೃ?ಮೂರ್ತಿ, ಬೆಳಕು: ಮಂಜುನಾಥ ಕೂದುವಳ್ಳಿ (ಮಂಕು) ಇದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!