ವಕೀಲರಾಗಿರುವ ಶ್ರೀಪಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಮಾಧ್ಯಮಗಳ ವಿರುದ್ಧವೇ ಟೀಕೆ ಮಾಡಿದ್ದಾರೆ. ದೃಶ್ಯ ಮಾಧ್ಯಮಗಳು ನೆನ್ನೆಯ ಘಟನೆಯನ್ನು ವಿಕೃತವಾಗಿ ತೋರಿಸಿದ್ದಾರೆ
. ಶಿವಮೊಗ್ಗ ಕೊತಕೊತ ಕುದಿಯುತ್ತಿದೆ ಎಂದು ಸುಳ್ಳು ಸುಳ್ಳಾಗಿ ತೋರಿಸಿದ್ದಾರೆ. ಆ ಚಾನಲ್ಗಳ ವಿರುದ್ಧ ಸ್ವಯಂ ಕೇಸು ದಾಖಲಿಸಬೇಕು ಎಂದಿದ್ದಾರೆ. ಆದರೆ ಈ ಶ್ರೀಪಾಲ್ಗೆ ಗೊತ್ತಿರಲಿ.
ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ. ಇರುವ ಸತ್ಯ ಸಂಗತಿಗಳನ್ನು ತೋರಿಸುತ್ತಾರೆ. ಈ ಶ್ರೀಪಾಲ್ ರಾಷ್ಟ್ರದ್ರೋಹಿಯಾಗಿದ್ದಾನೆ. ಮೊದಲು ಈತನನ್ನು ಬಂಧಿಸಬೇಕು ಎಂದು ಈಶ್ವರಪ್ಪ ತಿಳಿಸಿದರು.