ತಾಲ್ಲೂಕಿನ ಬೆಳಂದೂರು ಗ್ರಾಮದಲ್ಲಿ ನಿಧಿಗಾಗಿ ಶೋಧ ಮಾಡಿದ ಆರೋಪದ ಮೇರೆಗೆ ಐವರ ವಿರುದ್ಧ ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗ್ರಾಮದ ಹೊರವಲಯದಲ್ಲಿ ಲಕ್ಷ್ಮಿದೇವರ ವಿಗ್ರಹಕ್ಕೆ ಹಾನಿ ಮಾಡಿ, ಭೂಮಿಯನ್ನು ಅಗೆದು ಆರೋಪಿಗಳು ನಿಧಿಗಾಗಿ ಶೋಧ ನಡೆಸಿದ್ದಾರೆ ಎಂದು ಗ್ರಾಮ ಸುಧಾರಣೆ ಸಮಿತಿ ಪ್ರಮುಖರು ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕೇಶವ, ಸಾಜು, ಅಂತೋನಿ, ಜನಾರ್ಧನ, ಸೋಮಶೇಖರ ಎಂಬು ವವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಕೇಶವ, ಅಂತೋನಿಯನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!