=

ಶಿವಮೊಗ್ಗ: ಸೋಗಾನೆಯ ಡಾ. ಕುವೆಂಪು ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಕನ್ನಡ ಭಾಷೆ ಅಕ್ಷರ ಬಿಟ್ಟು ಹಿಂದಿ ಮತ್ತು ಇಂಗ್ಲಿಷ್ ಅಕ್ಷರಗಳ ನಾಮಫಲಕಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅದನ್ನು

ತೆರವುಗೊಳಿಸಿ ಕನ್ನಡದಲ್ಲಿ ದೊಡ್ಡ ಅಕ್ಷರದಲ್ಲಿ ನಾಮಫಲಕ ಅಳವಡಿಸಲು ಆಗ್ರಹಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆಯಿಂದ ನಿಲ್ದಾಣದ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಕುವೆಂಪು ವಿಮಾನ ನಿಲ್ದಾಣದಲ್ಲಿ ಈಗಾಗಲೇ ವಿಮಾನ ಹಾರಾಟ ಆರಂಭವಾಗಿದ್ದು, ಕುವೆಂಪುರವರ ಹೆಸರನ್ನು ಇಡಲಾಗಿದೆ. ಕುವೆಂಪುರವರ ಜನ್ಮಭೂಮಿ ಕೂಡ ಶಿವಮೊಗ್ಗವಾಗಿದ್ದು, ಈ ನಿಲ್ದಾಣದಲ್ಲಿ ಹಿಂದಿ, ಇಂಗ್ಲಿಷ್ ನಾಮಫಲಕಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.


ಕೂಡಲೇ ಅನ್ಯ ಭಾಷೆಯ ನಾಮಫಲಕ ತೆರವುಗೊಳಿಸಿ ಕನ್ನಡ ಭಾಷೆಯ ನಾಮಫಲಕಗಳನ್ನು ನಿಲ್ದಾಣದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಅಳವಡಿಸಬೇಕು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ಎಚ್ಚರಿಕೆ ನೀಡಿದ

.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ವಾಟಾಳ್ ಮಂಜುನಾಥ್, ಪ್ರಶಾಂತ್, ನಿತಿನ್ ರೆಡ್ಡಿ, ನಾರಾಯಣ್, ಸತೀಶ್ ಗೌಡ, ವಿಜಯ್, ಪರಮೇಶ್, ಲೋಕೇಶ್, ರಾಘವೇಂದ್ರ, ಪ್ರ್ಯಾಕ್ಲಿನ್ ಸಾಲೋಮನ್ ಸಂತೋಷ್, ಅಕ್ಬರ್ ಬಾಷಾ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!