ತೀರ್ಥಹಳ್ಳಿ, ಆ.೨೪:
ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ವಿನಾಯಕ ಚಿತ್ರಮಂದಿರ ಮುಂಭಾಗದ ವಿನ್ಯಾಸದ ಗೋಡೆ ಮಂಗಳವಾರ ರಾತ್ರಿ ಸುಮಾರು ೯.೩೦ಕ್ಕೆ ಕುಸಿದಿದೆ. ಸೆಕೆಂಡ್ ಶೋ ಸಿನಿಮಾ ವೀಕ್ಷಣೆಗೆ ತೆರಳಿದ್ದ ಪ್ರೇಕ್ಷಕರು
ಪ್ರಾಣಾಪಾಯದಿಂದ ಪಾರಾಗಿದ್ದು, ಸುಮಾರು ೮ಕ್ಕೂ ಹೆಚ್ಚು ಬೈಕ್, ಸ್ಕೂಟಿಗಳು ಜಖಂಗೊಂಡಿವೆ.
ಸೆಕೆಂಡ್ ಶೋ ನೋಡಲು ಬೈಕ್‌ನಲ್ಲಿ ಅನೇಕರು ಬಂದಿದ್ದರು
. ಗೋಡೆ ಕುಸಿತಗೊಂಡ ಪರಿಣಾಮ ಮುಂಭಾಗ ನಿಲ್ಲಿಸಿದ್ದ ಬೈಕ್‌ಗಳು ಜಖಂಗೊಂಡಿದ್ದು ಪ್ರೇಕ್ಷಕರು ವಾಪಸ್ ಮನೆಗೆ ತೆರಳಲು ಪರದಾಡಿದರು. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
೧೯೮೭ರಲ್ಲಿ ಆರಂಭಗೊಂಡ ವಿನಾಯಕ ಚಿತ್ರಮಂದಿರದಲ್ಲಿ
೩೩೦ ಫಸ್ಟ್ ಕ್ಲಾಸ್, ೧೪೦ ಬಾಲ್ಕನಿ ಸೀಟುಗಳಿವೆ. ಈಚೆಗೆ ಪ್ರೇಕ್ಷಕರನ್ನು ಸೆಳೆಯುವ ಚಿತ್ರಗಳ ಕೊರತೆ, ಒಟಿಟಿ, ಮಲ್ಟಿಫ್ಲೆಕ್ಸ್ ಮುಂತಾದ ಕಾರಣಗಳಿಂದ ಚಿತ್ರಮಂದಿರ ಸೊರಗಿತ್ತು. ಪ್ರತಿ ಶೋಗೆ ಸುಮಾರು ? ೫,೦೦೦ ಖರ್ಚಾಗುತ್ತದೆ. ಲಾಭಕ್ಕಿಂತ ನಷ್ಟ ಯಾಕೆ ಮಾಡಿಕೊಳ್ಳಬೇಕು
ಎಂದು ಮಾಲೀಕರು ಹೊಸ ಉದ್ಯಮ ಸ್ಥಾಪಿಸುವ ಆಲೋಚನೆ ಹೊಂದಿದ್ದರು. ಕಾಂತಾರ ಸಿನಿಮಾ ನೀಡಿದ ಭರ್ಜರಿ ಕಲೆಕ್ಷನ್ ಮಾಲೀಕರ ಆಲೋಚನೆಗೆ ಅಲ್ಪಕಾಲದ ವಿರಾಮ ನೀಡಿತ್ತು.