ಶಿವಮೊಗ್ಗ: ಎಟಿಎನ್‌ಸಿ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಶಿಬಿರ ಕಾಲೇಜಿನ ಚಂದನ ಸಭಾಂಗಣದಲ್ಲಿ ಆ. ೨೦ರಿಂದ ೨೬ ರವರೆಗೆ ಹಮ್ಮಿಕೊಳ್ಳಲಾಗಿದೆ.
ಆ.೨೦ರಂದು ಸಂಜೆ ೫ ಗಂಟೆಗೆ ಶಿಕ್ಷಣ ಸಚಿವ ಎಸ್.ಮಧುಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕುವೆಂಪು ವಿವಿ ಪ್ರಭಾರ ಕುಲಪತಿ ಡಾ. ಎಸ್. ವೆಂಕಟೇಶ್, ಶಾಸಕ ಎಸ್.ಎನ್. ಚನ್ನಬಸಪ್ಪಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.
೨೧ರಿಂದ ೨೬ರವರೆಗೆ ಪ್ರತಿದಿನ ಸಂಜೆ ೩ರಿಂದ ೫ರ ವರೆಗೆ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಮಾತನಾಡುವರು.
ಸಮಾರೋಪ ಸಮಾರಂಭ ಆ.೨೬ರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ‍್ಯಾ ನಾಯ್ಕ, ಡಿ.ಎಸ್. ಅರುಣ್, ಜಿಪಂ ಸಿಇಒ ಡಾ ಸ್ನೇಹಲ್ ಸುಧಾಕರ್ ಲೋಖಂಡೆ ಭಾಗವಹಿಸುವರು. ಸಮಾರೋಪ ಭಾಷಣವನ್ನು ಪ್ರಾಂತೀಯ ರಾ.ಸೇ.ಯೋ.ನ ನಿರ್ದೇಶಕ ಡಿ. ಕಾರ್ತಿಕೇಯನ್ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಿಬಿರದ ನಿರ್ದೇಶಕ ಡಾ. ನಾಗರಾಜ ಪರಿಸರ ಹಾಗೂ ಪ್ರೊ. ಮಮತಾ ಕೋರಿದ್ದಾರೆ.
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಪ್ರೊ.ಎಸ್. ವೆಂಕಟೇಶ್ ಅವರನ್ನು ರಾಜ್ಯಪಾಲರು ನೇಮಿಸಿ ಆದೇಶ ಹೊರಡಿಸಿದ್ದು, ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು.
ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ ಡೀನರು ಮತ್ತು ವಾಣಿಜ್ಯ ಶಾಸ್ತ್ರ ವಿಭಾಗದ ಅಧ್ಯಕ್ಷರಾಗಿರುವ ಪ್ರೊ. ಎಸ್. ವೆಂಕಟೇಶ್ ಅವರು, ಎರಡು ದಶಕಗಳಿಗೂ ಹೆಚ್ಚಿನ ಅಧ್ಯಾಪನ ಅನುಭವ ಹೊಂದಿದ್ದಾರೆ.