ಶಿವಮೊಗ್ಗ,ಆ,07:

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 19.70 ಮಿಮಿ ಮಳೆಯಾಗಿದ್ದು, ಸರಾಸರಿ 3.30 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿಮಿ ಇದ್ದು, ಇದುವರೆಗೆ ಸರಾಸರಿ ಕೇವಲ 41.27 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ ತಾಲ್ಲೂಕಿಗೆ ಮಳೆಯೇ ಮಾಯವಾಗಿದೆ.
ಶಿವಮೊಗ್ಗ 01.00 ಮಿಮಿ., ಭದ್ರಾವತಿ 02.70 ಮಿಮಿ., ತೀರ್ಥಹಳ್ಳಿ 3.90 ಮಿಮಿ., ಸಾಗರ 6.30 ಮಿಮಿ., ಶಿಕಾರಿಪುರ 0.60 ಮಿಮಿ., ಸೊರಬ 01.00 ಮಿಮಿ. ಹಾಗೂ ಹೊಸನಗರ 4.20 ಮಿಮಿ. ಮಳೆಯಾಗಿದೆ.

ತುಂಗಾ ಎಡದಂಡೆ ಕಾಲುವೆ ನೀರಿನ ಹರಿವು ಕಡಿಮೆ ಸಂಭವ: ಸಹಕರಿಸುವಂತೆ ರೈತರಿಗೆ ಮನವಿ


2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಂಗಾ ಎಡದಂಡೆ ಕಾಲುವೆಯಲ್ಲಿ ಮಳೆಯ ನೀರಿನ ಹರಿವಿನಿಂದ ಕಸಕಡ್ಡಿ ಮತ್ತು ಮಣ್ಣು ಹರಿದು ಬಂದು ತುಂಗಾ ಎಡದಂಡೆ ಕಾಲುವೆಯ ಸರಪಳಿ 20.00 ಕಿ.ಮೀ. ನಲ್ಲಿರುವ ಸುರಂಗ ಮಾರ್ಗದಲ್ಲಿ ಸಿಲುಕಿರುವುದರಿಂದ ಸುರಂಗ ಮಾರ್ಗದಲ್ಲಿ ನೀರು ಸರಾಗವಾಗಿ ಹರಿದುಬರಲು ಅಡಚಣೆಯಾಗಿದೆ. ಈ ಸುರಂಗ ಮಾರ್ಗವನ್ನು ಸ್ವಚ್ಛಗೊಳಿಸಲು 3 ರಿಂದ 5 ದಿನಗಳ ಕಾಲಾವಕಾಶ ಬೇಕಾಗಿರುವುದರಿಂದ ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುವ ಸಂಭವವಿದ್ದು, ತುಂಗಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಭಾಗದ ರೈತರು ಸಹಕರಿಸುವಂತೆ ಕನೀನಿನಿ ತುಂ.ಮೇ.ಯೋ.ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮನವಿ ಮಾಡಿರುತ್ತಾರೆ.


ಲಾಶಯಗಳ ನೀರಿನ ಮಟ್ಟ:

ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1790.50 (ಇಂದಿನ ಮಟ್ಟ), 11407.00 (ಒಳಹರಿವು), 3075.92 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1802.55. ಭದ್ರಾ: 186 (ಗರಿಷ್ಠ), 164.50 (ಇಂದಿನ ಮಟ್ಟ), 4011.00 (ಒಳಹರಿವು), 192.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.40. ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 9169.00 (ಒಳಹರಿವು), 9169.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 581.56 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1925 (ಒಳಹರಿವು), 640.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 585.52 (ಎಂಎಸ್‍ಎಲ್‍ಗಳಲ್ಲಿ). ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.86 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 1409 (ಒಳಹರಿವು), 1005.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.24 (ಎಂಎಸ್‍ಎಲ್‍ಗಳಲ್ಲಿ). ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 571.38 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 411.00 (ಒಳಹರಿವು), 1543.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 573.28 (ಎಂಎಸ್‍ಎಲ್‍ಗಳಲ್ಲಿ). ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 578.10 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 930.00 (ಒಳಹರಿವು), 1444.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 575.10 (ಎಂಎಸ್‍ಎಲ್‍ಗಳಲ್ಲಿ).

By admin

ನಿಮ್ಮದೊಂದು ಉತ್ತರ

error: Content is protected !!