ತಾಲ್ಲೂಕಿನ ಸಾಗರ-ಸೊರಬ ರಸ್ತೆಯಲ್ಲಿ ಸೈಕಲ್ ಸವಾರನಿಗೆ ಓಮಿನಿ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.


ಕೆಳದಿ ಗ್ರಾಮದ ಶ್ರೀಧರ್ (೫೫) ಎಂಬುವವರು ಸೈಕಲ್‌ನಲ್ಲಿ ಸಮೀಪದಲ್ಲಿರುವ ತಮ್ಮ ಜಮೀನಿಗೆ ನೀರು ಕಟ್ಟಿ ವಾಪಾಸ್ ಬರುತ್ತಿದ್ದಾಗ ಓಮಿನಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಸೈಕಲ್ ಸವಾರ ಶ್ರೀಧರ್ ಸ್ಥಳದಲ್ಲಿಯೆ ಮೃತಪಟ್ಟಿದ್ದು, ಓಮಿನಿ ಚಾಲಕ ಪರಾರಿಯಾಗಿದ್ದಾನೆ.


ಈ ಸಂಬಂಧ ಶ್ರೀಧರ್ ಅವರ ಪುತ್ರ ಸಂದೀಪ್ ಗ್ರಾಮಾಂತರ ಠಾಣೆಗೆ ಓಮಿನಿ ಚಾಲಕನು ಅಜಾಗರೂಕತೆಯಿಂದ ಚಾಲನೆ ಮಾಡಿದ್ದೆ ಅಪಘಾತಕ್ಕೆ ಕಾರಣ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!