ಶಿವಮೊಗ್ಗ, ಜು.೨೦:
ಕುವೆಂಪು ವಿಶ್ವವಿದ್ಯಾಲಯದ ೩೩ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಜು.೨೨ರ ಬೆಳಿಗ್ಗೆ ೧೦-೩೦ಕ್ಕೆ ವಿವಿಯ ಜ್ಞಾನ ಸಹ್ಯಾದ್ರಿ ಬಸವ ಸಭಾಭವನದಲ್ಲಿ ಏರ್ಪಡಿಸ ಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ವಿದ್ಯಾಲಯದ ಕುಲಾದಿ ಪತಿ ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಗ್ರ ಸ್ಥಾನ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಾಧಿಪತಿ ಹಾಗೂ ಬೆಂಗಳೂ ರಿನ ಇಸ್ರೋದ ವಿಶಿಷ್ಟ ಪ್ರಾಧ್ಯಾಪಕ ಪದ್ಮಭೂಷಣ, ಪದ್ಮಶ್ರೀ ಡಾ. ಸುರೇಶ್ ಬಿ.ಎನ್. ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿಯ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಉಪಸ್ಥಿತರಿರುವರು ಎಂದರು.


ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿ ಪಡೆಯಲು ೯೮ ಪುರುಷರು ಹಾಗೂ ೬೧ ಮಹಿಳೆಯರು ಸೇರಿ ಒಟ್ಟೂ ೧೫೯ ಅಭ್ಯರ್ಥಿಗಳು ಅರ್ಹರಾಗಿದ್ದು, ೫೪೯೯ ಪುರುಷರು ಹಾಗೂ ೯೨೫೧ ಮಹಿಳೆಯರು ಸೇರಿ ಒಟ್ಟು ೧೪೭೫೦ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದರು.


ಘಟಿಕೋತ್ಸವದಲ್ಲಿ ೧೪೧ ಸ್ವರ್ಣ ಪದಕವನ್ನು ೧೬ ಪುರುಷರು ಹಾಗೂ ೫೮ ಮಹಿಳೆಯರು ಸೇರಿ ಒಟ್ಟು ೭೪ ವಿದ್ಯಾರ್ಥಿ ಗಳು ಹಂಚಿಕೊಂಡಿದ್ದಾರೆ. ೧೮ ನಗದು ಬಹುಮಾನವಿದ್ದು, ಅವುಗಳನ್ನು ಮೂವರು ಪುರುಷರು ಮತ್ತು ೧೩ ಮಹಿಳೆಯರು ಸೇರಿ ಒಟ್ಟು ೧೬ ವಿದ್ಯಾರ್ಥಿಗಳು ಹಂಚಿಕೊಂಡಿ ದ್ದಾರೆ ಎಂದರು.


ಎಂ.ಎ(ಕನ್ನಡ)ದಲ್ಲಿ ವಿ. ವಿಸ್ಮಿತಾ ಅವರು ಅತಿಹೆಚ್ಚು ೧೨ ಸ್ವರ್ಣ ಪದಕ ಹಾಗೂ ೨ ನಗದು ಬಹುಮಾನ ಪಡೆದಿದ್ದಾರೆ. ವಿವಿಧ ಅಧ್ಯಯನ ವಿಭಾಗಗಳಲ್ಲಿ ಆರ್. ಆಶಾ, ಆರ್.ನೇಹಾ, ಯು. ರೋಹಿಣಿ, ಎ.ತೃಪ್ತಿ, ಎಸ್.ರಮ್ಯ, ಇವರು ತಲಾ ೫ ಸ್ವರ್ಣ ಪದಕ ಪಡೆದಿದ್ದು, ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ಎಂ. ಧನುಷ್ ಚೌಹಾಣ್ ೪ ಸ್ವರ್ಣ ಹಾಗೂ ೨ ನಗದು ಬಹುಮಾನ, ತರನುಮ್ ಬಾನು, ವಿ.ಎನ್. ಶ್ರೀನಿವಾಸ, ಪಿ.ಎಂ. ಪ್ರಿಯಾಂಕ ಹಾಗೂ ಬಿಂದು ದಿನೇಶ್ ನಾಯಕ್ ಇವರು ತಲಾ ೪ ಸ್ವರ್ಣ ಪದಕ ಮತ್ತು ಬಿ.ಇಡಿ ನಲ್ಲಿ ಎ. ಗಜಲಾ ಹಫೀಜ್ ಇವರು ಮೂರು ಸ್ವರ್ಣ,

ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ ಉಡುಪಿಯ ಸದಾನಂದ ಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ವಿಜಯಪುರ ಜಿಲ್ಲೆಯ ಕಲಗೇರಿಯ ಪಂ.ರಾಜಗುರು ಗುರುಸ್ವಾಮಿ, ಶಾಸಕರಾದ ದಾವಣಗರೆ ಜಿಲ್ಲೆಯ ಅಣಜಿಗೊಲ್ಲರಹಳ್ಳಿಯ ಎಂ. ಚಂದ್ರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!