*
ಶಿವಮೊಗ್ಗ, ಜುಲೈ 14,
ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಇರುವ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಇವರ ಪೆಟ್ರೋಲಿಯಂ ರಿಟೇಲ್ ಮಳಿಗೆ ಮಾರಾಟಗಾರರಿಗಾಗಿ ಅರ್ಜಿಯನ್ನು ಕರೆಯಲಾಗಿದ್ದು,

ಆಸಕ್ತ ಅರ್ಹ ಮಾಜಿ ಸೈನಿಕರು “ಡಿಫೆನ್ಸ್” ವರ್ಗ (ಕ್ಯಾಟಗರಿ) ದಡಿಯಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


      ವೆಬ್‍ಸೈಟ್ www.petrolpumpdealerchayan.in ಇಲ್ಲಿ ಸೆಪ್ಟೆಂಬರ್ 27 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!