ಶಿವಮೊಗ್ಗ,ಜು.14:

ರ್ಗಾವಣೆ ಇಲ್ಲದೆ ಅಲೆದಾಡುತ್ತಿರುವ ಜಿಪಿಟಿ 2016 ಬ್ಯಾಚ್ ನ ಆಂಗ್ಲ ಭಾಷಾ ಶಿಕ್ಷಕರು.
ನಾನೊಬ್ಬ ಬೆಳಗಾವಿ ವಿಭಾಗದಲ್ಲಿ ಬರುವಂತಹ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ನನ್ನ ವಿಷಯ ಆಂಗ್ಲ ಭಾಷೆ.
ಪಿ ಎಸ್ ಟಿ ಮತ್ತು ಜಿಪಿಟಿ ಎಂಬ ಶಿಕ್ಷಕರ ಜಗಳದಲ್ಲಿ ತಂದೆ ತಾಯಿಯಿಂದ ದೂರವಿರುವ ಶಿಕ್ಷಕರು ವರ್ಗಾವಣೆಗಾಗಿ ಪ್ರತಿ ಕ್ಷಣವು ಪರಿತಪಿಸುತ್ತಿದ್ದಾರೆ.
ಯಾವಾಗಲೂ ವರ್ಗಾವಣೆ ಅನ್ನೋದು ಮೊದಲು ವಿಭಾಗದ ಹೊರಗಿನಿಂದ ಬರುವವರಿಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು ತಮ್ಮ ಸ್ವಂತ ಜಿಲ್ಲೆಯಿಂದ ಹೊರಗಡೆ ನೌಕರಿ ಮಾಡುವವರಿಗೆ ಪ್ರಥಮ ಆದ್ಯತೆ ಕೊಟ್ಟು ಅವರನ್ನು ತಮ್ಮ ಜಿಲ್ಲೆ ಒಳಗೆ ಕರೆದುಕೊಳ್ಳುವಂತಹ ಅವಕಾಶವನ್ನು ಮಾಡಿಕೊಡಬೇಕು ಆದರೆ ನಮ್ಮ ಇಲಾಖೆ ಮೊದಲು ಜಿಲ್ಲಾ ಅಂತ ನಂತರ ವಿಭಾಗದ ಒಳಗೆ ಅದಾದ ನಂತರ ವಿಭಾಗದ ಹೊರಗೆ ಎಂದು ಕೋರಿಕೆ ವರ್ಗಾವಣೆಯನ್ನು ನಡೆಸುತ್ತದೆ.


ಜಿಲ್ಲಾ ಅಂತ ಮುಗಿದು ವಿಭಾಗದ ಒಳಗೆ ಕೋರಿಕೆ ವರ್ಗಾವಣೆ ಮುಗಿದು ನಂತರ ವರ್ಗಾವಣೆ ಪಡೆಯುವವರು ಹೋಗಿ ಕೌನ್ಸಿಲಿಂಗ್ ಕುಳಿತಾಗ ಅವರಿಗೆ ಯಾವುದೇ ಸ್ಥಳಗಳು ಖಾಲಿ ಇರುವುದಿಲ್ಲ ಆದರೆ ತಮ್ಮ ಸ್ವಂತ ಜಿಲ್ಲೆಯಲ್ಲಿಯೇ ಇದ್ದು ಅವರು ಪುನಃ ತಮ್ಮ ಹತ್ತಿರದ ಪ್ರದೇಶಗಳಿಗೆ ಬರೋದಕ್ಕೆ ಪರದಾಡುತ್ತಾರೆ ಆದರೆ ನಾವು ಹೊರಗಿನಿಂದ ಬರುವವರು ಯಾವುದೇ ಒಂದು ಸ್ಥಳಕೊಟ್ಟರೆ ಸಾಕಪ್ಪ ನಮ್ಮ ಜಿಲ್ಲೆಗೆ ಬಂದ್ರೆ ಸಾಕಪ್ಪ ಅನ್ನೋ ರೀತಿ ಕೋರಿಕೆ ವರ್ಗಾವಣೆಯಲ್ಲಿ ಪರಿತಪಿಸುತ್ತಿರುತ್ತೇವೆ..

https://tungataranga.com/?p=21845
ರಾಜ್ಯದೆಲ್ಲೆಡೆಯಿಂದ “ತುಂಗಾ ತರಂಗ” ವರದಿಗೆ ರೆಸ್ಪಾನ್ಸ್, ಬಂಗಾರಪ್ಪ ಪುತ್ರ ಮಧೂಜೀ ಶಿಕ್ಷಕರ ಈ ಅಳಲು ಕೇಳಿ

ಆದರೆ ಕೊನೆಗೆ ನಮಗೆ ಯಾವುದೇ ರೀತಿಯ ಅವಕಾಶಗಳು ದೊರೆಯುವುದಿಲ್ಲ ಅದರಲ್ಲೂ ನಾನೊಬ್ಬ ಜಿಪಿಟಿ ಆಂಗ್ಲ ಭಾಷೆ ಶಿಕ್ಷಕ ನಾನು ಮೊದಲು ಕೌನ್ಸಲಿಂಗ್ ಹೋದಾಗ ಆಂಗ್ಲ ಭಾಷೆ 6 ರಿಂದ 8ನೇ ತರಗತಿಯಲ್ಲಿ 3ನೇ ಹುದ್ದೆಯಾಗಿತ್ತು ನಂತರದಲ್ಲಿ ಆಂಗ್ಲ ಭಾಷೆ 4ನೇ ಹುದ್ದೆಯಾಯಿತು ಪ್ರಸ್ತುತ ವಾಗಿ 5 ನೇ ಹುದ್ದೆ ಯಾಗಿದೆ. ಆಂಗ್ಲ ಭಾಷೆ ಐದನೇ ಹುದ್ದೆ ಆಗಿರುವುದರಿಂದ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಕೇವಲ ಒಂದೇ ಒಂದು ವೇಕೆನ್ಸಿ ಮಾತ್ರ ಇದೆ ಹೀಗೆ ಆದಲ್ಲಿ ನಾನು ನಮ್ಮ ಸ್ವಂತ ಜಿಲ್ಲೆಗೆ ಬರುವುದಿರಲಿ ನನ್ನ ವೃತ್ತಿ ಜೀವನವನ್ನು ಬೆಳಗಾವಿ ಭಾಗದಲ್ಲೇ ಕಳೆಯಬೇಕಾಗುತ್ತದೆ.


2019 ಮತ್ತು 2021 ರ ವರ್ಗಾವಣೆಯಲ್ಲಿ ನನ್ನ ಜೊತೆ ನೌಕರಿ ಪಡೆದವರು ಅವರ ಸ್ವಂತ ಜಿಲ್ಲೆಗೆ ವಾಪಸು ಮರುಳಾಯಿತು ಆದರೆ ನನ್ನ ದುರಾದೃಷ್ಟ ವರ್ಷ ಆಂಗ್ಲ ಭಾಷೆಯಾಗಿದ್ದರಿಂದ ನನಗೆ ನಮ್ಮ ಶಿವಮೊಗ್ಗ ಜಿಲ್ಲೆಗೆ ಹೋಗಲು ಅವಕಾಶವೇ ಸಿಗಲಿಲ್ಲ ಆದರೆ ಒಂದು ರೀತಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಬರುವಂತಹ ಅವಕಾಶಗಳು ತುಂಬಾ ಇದ್ದವು ಆದರೆ ಆ ಆಂಗ್ಲ ಭಾಷೆ ಜಿಪಿಟಿ ಹುದ್ದೆಗಳನ್ನು ಪಿ ಎಸ್ ಟಿ ಸಿ ಆರ್ ಪಿ ರವರಿಗೆ ಕೊಟ್ಟಾಯಿತು ಇದರಿಂದ ನನಗೆ ವರ್ಗಾವಣೆಯ ಭಾಗ್ಯ ಸಿಗಲಿಲ್ಲ ಇದರಿಂದ ನಮಗೆ ತುಂಬಾ ತೊಂದರೆಯಾಯಿತು ಪಿ ಎಸ್ ಟಿ ಅವರಿಗೆ ಜಿಪಿಟಿ ಹುದ್ದೆಗಳು ನೀಡಿದರೆ ಕೊನೆಗೆ ನಾವು ಎಲ್ಲಿ ನೌಕರಿ ಪ್ರಾರಂಭಿಸಿದವೋ ಅಲ್ಲೇ ವೃತ್ತಿ ಜೀವನದ ನಿವೃತ್ತಿಯನ್ನು ಪಡೆಯಬೇಕಾಗುತ್ತದೆ ಇನ್ನೊಂದು ಸಂಕಷ್ಟ ಬಂದು ಎದುರಾಯಿತು ಅದೇ ಹತ್ತು ವರ್ಷಗಳ ಕಡ್ಡಾಯ ಸೇವೆ ಎಂಬ ನಿಯಮ ಇದು ಮೊದಲು ಇದ್ದಂತಹ ಜಿಪಿಟಿ ಅವರಿಗೆ ಯಾವುದನ್ನು ಅನುಸರಿಸಲಿಲ್ಲ 2016 ಈ ಬ್ಯಾಚ್ಗೆ ಇದೊಂದು ಕಂಠಕವಾಯಿತು 2018 ಈ ಬ್ಯಾಚ್ ಗೆ ಒಂದು ಜಿಲ್ಲೆಯಲ್ಲಿ ಐದು ವರ್ಷ ಕಡ್ಡಾಯ ಸೇವೆ ಆದರೆ ನಮಗೆ ಅದೇ ತಾಲೂಕಿನಲ್ಲಿ 10 ವರ್ಷ ಕಡ್ಡಾಯ ಸೇವೆ ಎಂಬ ನಿಯಮ ಜಾರಿಗೆ ಬಂದಿತು 2017 ರಿಂದ ತಾಲೂಕು ಘಟಕ ಇದ್ದಿದ್ದು ಜಿಲ್ಲಾ ಘಟಕವಾಯಿತು ಆದರೂ ಯಾರೂ ಕೂಡ ನಮ್ಮ ತಾಲೂಕು ಘಟಕದಿಂದ ಜಿಲ್ಲಾ ಘಟಕಕ್ಕೆ ನಮ್ಮನ್ನ ಬದಲಾವಣೆ ಮಾಡಲಿಲ್ಲ ನೇಮಕಾತಿ ಪ್ರಾಧಿಕಾರ ಬಿಈಓ ರವರೆ ಎಂದಾಯಿತು..

https://tungataranga.com/?p=21779
ಪಿಎಸ್‌ಟಿ-ಜಿಪಿಟಿ ನಡುವೆ ಶಿಕ್ಷಕರು ಹೈರಾಣು…, ಶಿಕ್ಷಕರ ವರ್ಗಾವಣೆಯಲ್ಲಿ ನೊಂದವರ ಅಳಲು ನಿಮಗೆ ಗೊತ್ತಾ ಸಚಿವರಾದ ಮಧುಜೀಯವರೇ …?


ನನ್ನ ಜೊತೆ ನೌಕರಿಗೆ ಬಂದಂತ ನನ್ನ ಸ್ನೇಹಿತರೆಲ್ಲರೂ ಅವರವರ ಜಿಲ್ಲೆಗೆ ಹೋಗಾಯ್ತು ಆದರೆ ನನ್ನ ಹುದ್ದೆ ಆಂಗ್ಲ ಭಾಷೆ ಆಗಿರುವುದರಿಂದ ನನಗೆ ವರ್ಗಾವಣೆಯೇ ಸಿಗಲಿಲ್ಲ ಈ ಸಲದ ವರ್ಗಾವಣೆಯಲ್ಲಿ ಆದರೂ ನನಗೆ ವರ್ಗಾವಣೆ ಸಿಗಬಹುದು ಎಂಬ ಆಸೆಯಲ್ಲಿ ಇದ್ದೆ, ಆದರೆ ಯಾರೋ ಒಬ್ಬರು ಶಿಕ್ಷಕರು ನಮ್ಮ ಆದೇಶ ಪ್ರತಿಯಲ್ಲಿರುವಂತೆ ಪಾಲನೆ ಮಾಡಲು ತಿಳಿಸಿ ಕೆ ಏಟಿಗೆ ಹೋದರು ಇದರಿಂದ ನಮಗೆಲ್ಲ ತುಂಬಾ ತೊಂದರೆಯಾಯಿತು ಎಲ್ಲರಿಗೂ ಒಂದೇ ನ್ಯಾಯ ಇದ್ದಿದ್ದರೆ ಏನು ಅನಿಸುತ್ತಿರಲಿಲ್ಲ ಆದರೆ ನನ್ನ ಜೊತೆ ಬಂದವರೆಲ್ಲ ಅವರವರ ಸ್ವಂತ ಜಿಲ್ಲೆಗೆ ವಾಪಸ್ ಮರಳಿದ ಮೇಲೆ ನನಗೆ ತುಂಬಾ ಮನಸ್ಸಿಗೆ ಆಘಾತವಾಯಿತು. ನಾನು ಆಂಗ್ಲ ಭಾಷೆ ಆಯ್ಕೆ ಮಾಡಿಕೊಂಡಿದ್ದೆ ತಪ್ಪಾ ಆಂಗ್ಲ ಭಾಷೆ ಶಿಕ್ಷಕನಾಗಿದ್ದೆ ತಪ್ಪಾ ಒಂದು ಶಾಲೆಯಲ್ಲಿ ಆರು ರಿಂದ ಎಂಟನೇ ತರಗತಿಯಲ್ಲಿ 157 ಮಕ್ಕಳಿದ್ದರೆ ಮಾತ್ರ ಅಲ್ಲಿ ಆಂಗ್ಲ ಭಾಷೆ ಹುದ್ದೆ ಇರುತ್ತದೆ ಈ ರೀತಿ ಆದಲ್ಲಿ ನನ್ನ ವರ್ಗಾವಣೆ ಸಾಧ್ಯವಿಲ್ಲ ಎನಿಸುತ್ತಿದೆ..

ಏಕೆಂದರೆ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಕೇವಲ ಒಂದೇ ಒಂದು ಆಂಗ್ಲ ಭಾಷೆ ಹುದ್ದೆ ಖಾಲಿ ಇದೆ ಅದು ಶಿವಮೊಗ್ಗ ನಗರದ ತುರ್ಕಿ ಪುಡಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾತ್ರ ಹೀಗಾದಾಗ ನಾವು ಯಾವ ಯಾವಾಗ ನಮ್ಮ ಕಡೆ ವರ್ಗಾವಣೆಯಾಗಿ ಬರುವುದು ಹೀಗಾದರೆ ಕೊನೆಯಲ್ಲಿ ನನ್ನ ವೃತ್ತಿ ಜೀವನ ಪೂರ್ತಿಯಾಗಿ ಬೆಳಗಾವಿ ಭಾಗದಲ್ಲಿ ಕಳೆಯಬೇಕಾಗುತ್ತದೆ ಇಲ್ಲಿ ಪಿ ಎಸ್ ಟಿ ಮತ್ತು ಜಿಪಿಟಿ ಗಳ ನಡುವೆ ತಾರತಮ್ಯ ಉಂಟಾಗಿ ತಂದೆ ತಾಯಿ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ರೀತಿ ನಮ್ಮ ಪರಿಸ್ಥಿತಿ ಎದುರಾಗಿದೆ..

  • ನೊಂದ ಶಿಕ್ಷಕ, ಬೆಳಗಾವಿ ಬಿಭಾಗ

By admin

ನಿಮ್ಮದೊಂದು ಉತ್ತರ

error: Content is protected !!