ಕಾಂಗ್ರೆಸ್ ಸರ್ಕಾರದ ವಿದ್ಯಾಸಿರಿ ಮತ್ತು ಉನ್ನತ ವ್ಯಾಸಂಗಕ್ಕೆ ಸ್ಕಾಲರ್ಶಿಪ್ ಯೋಜನೆ ಯನ್ನು ರದ್ದುಪಡಿಸಿದ ಬಿಜೆಪಿಗೆಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ.
ಲಕ್ಷಾಂತರ ಮೆಟ್ರಿಕ್ ಟನ್ ಅಕ್ಕಿ ಕೊಳೆ ಯುತ್ತಾ ಬಿದ್ದಿದ್ದರೂ ದ್ವೇಷದ ರಾಜಕಾರಣದಿಂದ ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ಸಿಗೆ ಕೆಟ್ಟ ಹೆಸರು ತರಬೇಕೆಂಬ ಏಕೈಕ ಉದ್ದೇಶದಿಂದ ಅಕ್ಕಿ ನೀಡುತ್ತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಶಿಮೊಗ್ಗ ರಾಮಣ್ಣ ಶ್ರೇಷ್ಠಿ ಮುಂಭಾಗದಿಂದ ಶಿವಪ್ಪ ನಾಯಕ ಪ್ರತಿಮೆ ವರೆಗೆ ಬೃಹತ್ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಬಳಿಕ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಸರ್ಕಾರದ ಬಳಿ ಅಕ್ಕಿ ದಾಸ್ತಾನಿ ದ್ದರೂ ರಾಜ್ಯಕ್ಕೆ ಮಾರಾಟ ಮಾಡಲು ತಂತ್ರಗಾರಿಕೆಯಿಂದ ನಿರಾಕರಿಸುತ್ತಿರುವ ಕೇಂದ್ರ ಬಿಜೆಪಿ ದ್ವೇಷದ ರಾಜಕಾರಣವನ್ನು ವಿರೋಧಿಸಿ ಇಂದು ಪ್ರತಿಭಟನೆ ಮಾಡಲಾಗುತ್ತಿದೆ.
ಇದು ಇಡೀ ರಾಜ್ಯಾದ್ಯಂತ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ನಡೆಯುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ನಡೆಯನ್ನು ಜನರಿಗೆ ತೋರಿ ಸುತ್ತಿಲ್ಲ.
ಈ ಗ್ಗೆ ಮಾಧ್ಯಮದವರು ಬೆಳಕು ಚೆಲ್ಲಬೇಕು. ಕಾರ್ಪೊರೇಟ್ ಕಂಪೆನಿಗಳಿಗೆ ಕೋಟ್ಯಂತರ ಹಣ ಸಾಲ ಮನ್ನಾ ಮಾಡುವ ನರೇಂದ್ರ ಮೋದಿ ಸರ್ಕಾರಕ್ಕೆ ಬಡವರ ಪರವಾದ ಯೋಜನೆಗಳ ಮೇಲೆ ದ್ವೇಷ ಯಾಕೆ ಎಂಬುದು ಅರ್ಥವಾಗುತ್ತಿಲ್ಲ.
ಎಷ್ಟೇ ಕಷ್ಟ ಬಂದರೂ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿಗಳನ್ನು ಜಾರಿಗೊಳಿಸಿಯೇ ಸಿದ್ಧ. ಈ ಯೋಜನೆಗಳು ಜಾರಿಯಾದರೆ ಇನ್ನು ಜೀವಮಾನದಲ್ಲಿ ಬಿಜೆಪಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೆ ಖಚಿತವಾ ಗಿದೆ. ಉಚಿತ ಬಸ್ ಯೋಜನೆ ಅಭೂತ ಪೂರ್ವ ಯಶಸ್ಸು ಕಂಡಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆ ಜಾರಿಯಾದರೆ ಬಿಜೆಪ ಕಥೆ ಮುಗಿಯುತ್ತದೆ. ಅದಕ್ಕಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಹೆಚ್.ಸಿ. ಯೋಗೀಶ್ ಮಾತನಾಡಿ, ಕೋಟ್ಯಂತರ ಜಿಎಸ್ಟಿ ತೆರಿಗೆ ನಮ್ಮ ರಾಜ್ಯ ದಿಂದ ಕೇಂದ್ರಕ್ಕೆ ಹೋಗಿದೆ. ಅವರು ಅಕ್ಕಿಯನ್ನು ಪುಗಸಟ್ಟೆ ಕೊಡುವುದು ಬೇಡ. ಮೊದಲು ಒಪ್ಪಿಕೊಂಡು ಈಗ ನಿರಾಕರಿಸುತ್ತಿರುವುದು ದ್ವೇಷದ ರಾಜಕಾರಣ. ಎಲ್ಲಾ ಅಸೆಂಬ್ಲಿ ಕ್ಷೇತ್ರ ದಲ್ಲೂ ಜನಜಾಗೃತಿ ಮೂಡಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಭೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಎಂಎಲ್ಸಿ ಪ್ರಸನ್ನಕು ಮಾರ್, ಇಸ್ಮಾಯಿಲ್ ಖಾನ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್, ಇಕ್ಕೇರಿ ರಮೇಶ್, ದೇವೇಂದ್ರಪ್ಪ, ವಿಶ್ವನಾಥ ಕಾಶಿ,ಗಿರೀಶ್, ಶೇಷಾದ್ರಿ, ಚಿನ್ನಪ್ಪ, ಅನಿತಾಕುಮಾರಿ, ಕವಿತಾ ರಾಘವೇಂದ್ರ, ಮಧುಸೂದನ್, ಸ್ಟೆಲ್ಲಾ ಮಾರ್ಟಿನ್, ವಿಜಯಲಕ್ಷ್ಮಿ ಪಾಟೀಲ್, ರಮೇಶ್ ಶಂಕರಘಟ್ಟ ಇತರರಿದ್ದರು.