ಕೆ.ವೈ.ಸಿ. ಅಪ್‌ಡೇಟ್ ನೆಪದಲ್ಲಿ ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬರನ್ನು ವಂಚಿಸಿದ ಘಟನೆಗೆ ಸಂಬಂಧಪಟ್ಟಂತೆ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೂರುದಾರರಿಗೆ ಜೂ. ೧೫ರಂದು ಅಪರಿಚಿತ ವ್ಯಕ್ತಿಯೊಬ್ಬ ತಾವು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಅಧಿಕಾರಿ ಎಂದು ಕರೆ ಮಾಡಿ ಬ್ಯಾಂಕ್ ವಿವರ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆಯನ್ನು ಕೇಳಿದ್ದಾನೆ. ಇದನ್ನು ನಂಬಿದ ದೂರುದಾರರು ತಮ್ಮ

ಬ್ಯಾಂಕ್ ವಿವರ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆಯನ್ನು ನೀಡಿದ್ದಾರೆ. ಬಳಿಕ ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆಯನ್ನು ತಿಳಿಸುವಂತೆ ಅಪರಿಚಿತ ವ್ಯಕ್ತಿ ಕೇಳಿದಾಗ ಅದನ್ನು ಸಹ ದೂರುದಾರರು ಬ್ಯಾಂಕ್ ವ್ಯವಸ್ಥಾಪಕರು ಇರಬೇಕು

ಎಂದು ನಂಬಿ ನೀಡಿದ್ದಾರೆ.


ನಂತರ ದೂರುದಾರರ ಬ್ಯಾಂಕ್ ಖಾತೆಯಿಂದ ೯೯ಸಾವಿರ ರೂ., ೮೮ ಸಾವಿರ ರೂ. ಸೇರಿದಂತೆ ಒಟ್ಟು ೧೯೫೪೯೯ರೂ. ಅನಧಿಕೃತವಾಗಿ ವರ್ಗಾವಣೆಯಾಗಿದ್ದು, ಈ ಸಂಬಂಧ ಸೋಮವಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೇಟೆ ಠಾಣೆಗೆ ದೂರು ನೀಡಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!