ಶಿವಮೊಗ್ಗ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಕ್ಯಾಪ್ಟನ್,
ಬಾಣಸಿಗ(ಅಡುಗೆಯವರು), ಅಡುಗೆ ಮನೆ ಸಹಾಯಕರು, ಸಹಾಯಕರು ಹಾಗೂ ಇತರೆ ಕೆಲಸಗಾರರ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಉದ್ಯೋಗಾವಕಾಶವಿದ್ದು, ಆಸಕ್ತ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜಾಲತಾಣದಲ್ಲಿ https://tinyurl.com/ksdcjodrive ನೋಂದಾಯಿಸಿಕೊಂಡು ಅಥವಾ ಜೂನ್ ೧೫ರಂದು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಮೇಳದಲ್ಲಿ ಭಾಗವಹಿಸಬಹುದಾಗಿದೆ
ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹೆಚ್.ಎಂ.ಸುರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ದೂರವಾಣಿ : ೦೮೧೮೨-೨೫೫೨೯೪, ಮೊ.೯೦೧೯೪೮೫೬೮೮ನ್ನು ಸಂಪರ್ಕಿಸಬಹುದಾಗಿದೆ.