: ಇಲ್ಲಿನ ವನಶ್ರೀ ಶಿಕ್ಷಣ ಸಂಸ್ಥಾಪಕ ಎಚ್.ಪಿ. ಮಂಜಪ್ಪ ಅವರ ಮೇಲೆ ಜಾತಿನಿಂದನೆ, ಪೋಸ್ಕೋ ಸೇರಿದಂತೆ ವಿವಿಧ ಪ್ರಕರಣಗಳು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.


ಜೂ. ೮ರಂದು ವಸತಿ ಶಾಲೆಯಲ್ಲಿ ೮ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಸೊರಬ ತಾಲ್ಲೂಕು ಶಿವಪುರ ಗ್ರಾಮದ ತೇಜಸ್ವಿನಿ ಎಂಬ ವಿದ್ಯಾರ್ಥಿನಿ ಅನುಮಾನಸ್ಪದವಾಗಿ ಮೃತಪಟ್ಟಿದರು. ವಿದ್ಯಾರ್ಥಿನಿ ಶವ ಪರೀಕ್ಷೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು ವರದಿ ಬರಬೇಕಾಗಿದೆ.


ವಿದ್ಯಾರ್ಥಿನಿ ಸಾವಿನ ತನಿಖೆ ನಡೆಸುವಂತೆ ಶನಿವಾರ ಪೋಷಕರು ಹಾಗೂ ವಿವಿಧ ಸಂಘಟನೆಗಳು ವನಶ್ರೀ ಶಾಲೆ ಎದುರು ಪ್ರತಿಭಟನೆ ನಡೆಸಿವೆ. ಪ್ರತಿಭಟನೆ ಸಂದರ್ಭದಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೆಲವು ವಿದ್ಯಾರ್ಥಿನಿಗಳು ಶಾಲಾ ಮುಖ್ಯಸ್ಥ ಮಂಜಪ್ಪ ಅವರು ಲೈಂಗಿಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ಅಶ್ಲೀಲ ಪದ ಬಳಸಿ ಬೈಯುತ್ತಿದ್ದರು ಎಂದು ಆರೋಪಿಸಿದ್ದರು.


ಪೋಷಕರು ಹಾಗೂ ಸಂಘಸಂಸ್ಥೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಮಂಜಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಮೃತ ತೇಜಸ್ವಿನಿ ಕುಟುಂಬ ನೀಡಿದ ದೂರಿನ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಎಚ್.ಪಿ.ಮಂಜಪ್ಪ ಅವರ ಮೇಲೆ ಐಪಿಸಿ ಸೆಕ್ಷನ್ ೫೦೪, ೫೦೬, ೩೫೪ಎ, ಕಲಂ ೮, ೧೨ ಅಡಿ ಪೋಸ್ಕೊ, ೩/೧ (ಡಬ್ಲ್ಯೂ) ೩(೨), ವಿ ರೀತ್ಯಾ ಎಸ್.ಸಿ.ಎಸ್.ಟಿ. ಅಡಿ ಪ್ರಕರಣ ದಾಖಲಾಗಿದೆ.


ಆರೋಪಿ ಮಂಜಪ್ಪನನ್ನು ಭಾನುವಾರ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!