ಭದ್ರಾವತಿ ತಾಲ್ಲೂಕಿನ ಡಿಬಿ ಹಳ್ಳಿಯ ಪದ್ಮ ದೀಪ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾರ ಶೆಟ್ಟಿಹಳ್ಳಿ ವೃತ್ತದಲ್ಲಿ ’ಹಸಿರು ಉಸಿರು ಉಳಿಸಿ’ ಎಂಬ ಬೀದಿ ನಾಟಕದ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.


ಪ್ರಕೃತಿ ಉಳಿಸುವುದು ಮಾನವನ ಆದ್ಯ ಕರ್ತವ್ಯ. ಭವಿಷ್ಯದಲ್ಲಿ ಕಾಡು ಉಳಿದರೆ ಮಾತ್ರ ನಾಡಿನಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಪದ್ಮ ದೀಪ ಪಬ್ಲಿಕ್ ಸ್ಕೂಲ್ ಅದ್ಯಕ್ಷ ಕಿರಣ್ ತಿಳಿಸಿದರು.


ಅರಣ್ಯ ನಾಶದಿಂದ ವನ್ಯಜೀವಿ ಹಾಗೂ ಮನುಷ್ಯರ ನಡುವೆ ಸಂಘರ್ಷ ಹೆಚ್ಚುತ್ತಿದೆ. ಸಮಾಜ ಎದುರಿಸುತ್ತಿರುವ ಸವಾಲಿನ ಕುರಿತಾದ ಸಂದೇಶ ನಾಟಕದಲ್ಲಿ ಅಡಕವಾಗಿದೆ ಎಂದು ನಾಟಕ ನಿರ್ದೇಶಕ ಆರ್. ಸಜಿ ಹೇಳಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಲ್ಲಿ ಗ್ರಾಮಸ್ಥರಿಗೆ ಗಿಡಗಳನ್ನು ವಿತರಿಸಿದರು. ಪ್ರಾಂಶುಪಾಲ ತಂಗರಾಜು, ಶಾಲಾ ಸಲಹಾ ಸಮಿತಿ ಮುಖ್ಯಸ್ಥ ಡಾ.ಕೆ. ವೆಂಕಟೇಶ್ವರ, ನಾಟಕದ ಸಂಗೀತ ಸಂಯೋಜಕಿ ಎಸ್.ಆರ್. ಸಂಗೀತ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!