ಶ್ರೀ ಕ್ಷೇತ್ರ ಕೂಡಲಿ ಶೃಂಗೇರಿ ಮಹಾಸಂ ಸ್ಥಾನದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮೀಜಿಯವರಿಂದ ದತ್ತರಾಜ ದೇಶಪಾಂಡೆಯವರ ಸನ್ಯಾಸ ಪೂರ್ವಕ ಶಿಷ್ಯ ಪದಗ್ರಹಣ ಸಮಾರಂಭ ವನ್ನು ಮೇ ೧೮ರಿಂದ ಮೇ ೨೨ರವರೆಗೆ ಕೂಡಲಿಯಲ್ಲಿ ನಡೆಯಲಿದೆ ಎಂದು ಹೆಬ್ಬಳ್ಳಿಯ ದತ್ತಾವಧೂತ ಶ್ರೀಗಳು ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆ ೫ ಗಂಟೆಗೆ ಉಭಯ ಶ್ರೀಗಳ ಪುರ ಪ್ರವೇಶ ನಡೆಯಲಿದೆ. ಮೇ ೧೮ರಂದು ಬೆಳಗ್ಗೆ ೯ರಿಂದ ೧೨.೩೦ರವರೆಗೆ ಗಣಪತಿ ಪೂಜಾ, ಸಂಕಲ್ಪ, ಕಲಶಸ್ಥಾಪನೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ೧೨.೩೦ಕ್ಕೆ ಸಭಾ ಕಾರ್ಯಕ್ರಮ, ಮಹಾನೈವೇದ್ಯ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದರು.
ಮೇ ೧ ರಂದು ಬೆಳಗ್ಗೆ ೯ರಿಂದ ಮಧ್ಯಾಹ್ನ ೧೨.೩೦ರವರೆಗೆ ವೇದ ಪಾರಾಯಣ ಹಾಗೂ ದೈವ, ಋಷಿ, ದಿವ್ಯ ಮನುಷ್ಯ ಶ್ರಾದ್ಧಗಳು ನಡೆಯಲಿವೆ. ಮಧ್ಯಾಹ್ನ ೧೨.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.ಯಣ ಹಾಗೂ ಭೂತ, ಪಿತೃ, ಮಾತೃ ಆತ್ಮ ಶ್ರಾದ್ಧಗಳು ನಡೆಯಲಿವೆ ಎಂದರು.
ಮೇ ೨೧ರಂದು ಬೆಳಗ್ಗೆ ೯ರಿಂದ ವೇದ ಪಾರಾಯಣ ಹಾಗೂ ಅನುಜ್ಞಾ ಪ್ರಾರ್ಥನೆ, ಪುಣ್ಯಾಹವಾಚನ, ವಪನ ಸಂಕಲ್ಪ, ಮಧ್ಯಾಹ್ನ ೧೨.೩೦ಕ್ಕೆ ಸಭಾ ಕಾರ್ಯಕ್ರಮ, ಸಂಜೆ ೫ಕ್ಕೆ ಅಗ್ನಿ ಪ್ರತಿಷ್ಠಾಪನ, ಪೂರ್ಣಾಹುತಿ, ಬ್ರಹ್ಮ ವಿಚಾರ ಹಾಗೂ ರಾತ್ರಿ ಜಾಗರಣೆ ನಡೆಯಲಿದೆ ಎಂದರು.
ಮೇ ೨೨ರಂದು ಬೆಳಗ್ಗೆ ೭ರಿಂದ ವಿವಿಧ ಹೋಮ, ಮಧ್ಯಾಹ್ನ ೧ ಕ್ಕೆ ಸಭಾ ಕಾರ್ಯಕ್ರಮ ಹಾಗೂ ಸಂಜೆ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯ ಲಿದೆ. ಪ್ರತಿದಿನ ಸಂಜೆ ೬.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾ ಸಭಾ ಜಿಲ್ಲಾಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್, ಸೂರ್ಯನಾರಾಯಣ ಮೊದಲಾದವರು ಇದ್ದರು.