ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕಣ್ಗಾವಲು ವಹಿಸಿದ್ದ ಜಿಲ್ಲಾ ರಕ್ಷ ಣಾಧಿಕಾರಿ ಮಿಥುನ್ ಕುಮಾರ್ ಅವರ ತಂಡದ ಪ್ರಯತ್ನ ಸಾಕಷ್ಟು ಅಕ್ರಮಗಳನ್ನು ಪತ್ತೆ ಹಚ್ಚಿದಲ್ಲದೇ ಮತದಾರರಿಗೆ

ಆಮಿಷವೊಡ್ಡಲು ಸಾಗಾಣಿಕೆ ಮಾಡುತ್ತಿದ್ದ ನಗದು, ಸೀರೆ, ಕುಕ್ಕರ್, ಮದ್ಯ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊ ಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಈ ನಡುವೆ ಮಹಾನಗರ ಪಾಲಿಕೆಯ ಆಯುಕ್ತ ಮಾಯ ಣ್ಣಗೌಡ ಅವರ ಸಹಕಾರ ದೊಂದಿಗೆ ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ಸಾಧನಗಳ ಮೂಲಕ ಸಮಗ್ರ ಮಾಹಿತಿಯನ್ನು ಒಂದೆಡೆ ವೀಕ್ಷಿಸು ವಂತಹ ಅವಕಾಶ ಕಲ್ಪಿಸಿದ್ದು ವಿಶೇಷ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಚೆಕ್ ಪೋಸ್ಟ್‌ಗಳು ಸಾಕಷ್ಟು ಬಿಗಿ ಭದ್ರತೆಯ

ನ್ನು ಹೊಂದಿದ್ದವು. ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಚೆಕ್‌ಪೋಸ್ಟ್‌ಗಳಷ್ಟೇ ಅಲ್ಲದೇ ಪೊಲೀಸ್ ಇಲಾಖೆಯ ಸಮರ್ಥ ತಂಡಗಳು ಅಕ್ರಮಗಳ ಎಳೆಗಳಿಗೆ ಬೇಲಿ ಹಾಕಿದ್ದವು.


ಅಂತೆಯೇ ಮತದಾನ, ನಂತರದ ಸಂಗ್ರಹ ಹಾಗೂ ಮತ ಏಣಿಕೆಗೆ ಸಂಬಂಧಪಟ್ಟಂತೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಲು ಈಗಾಗಲೇ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ಪೊಲೀಸ್ ಸೇರಿದಂತೆ ರಕ್ಷಣಾ ಇಲಾಖೆಗಳು ಪ್ರಶಂಸಿಸಿ ಅಭಿನಂದಿಸಿವೆ.

By admin

ನಿಮ್ಮದೊಂದು ಉತ್ತರ

error: Content is protected !!