ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ರಂಜಾನ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಮುಸ್ಲಿಂ ಬಾಂಧವರು ನಗರದ ಈದ್ಗಾ ಮೈದಾನ ದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.


ಮಕ್ಕಳು ಹಾಗೂ ದೊಡ್ಡವರು ಹೊಸ ಉಡುಪು ಗಳನ್ನು ಧರಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಗಮನ ಸೆಳೆಯುತ್ತಿತ್ತು. ನಗರದ ಮುಸ್ಲಿಮರು ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪೊಲೀಸ್ ಸಿಬ್ಬಂದಿ ವರ್ಗ ಮೆರವಣಿಗೆಗೆ ರಕ್ಷಣೆ ನೀಡಿದರು.


ಈದ್ಗಾ ಮೈದಾನದಲ್ಲಿ ನಗರದ ವಿವಿಧ ಬಡಾವಣೆ ಗಳಿಂದ ಬಂದ ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡೊಕೊಂಡರು.


೩೦ ದಿನ ಉಪಾವಾಸದ ನಂತರ ಹಬ್ಬ ಆಚರಣೆಯೊಂದಿಗೆ ಉಪವಾಸ ಅಂತ್ಯಗೊಳ್ಳುತ್ತಿದೆ.
ಈದ್ಗಾ ಮೈದಾನ ಸೇರಿ ರಾಗಿಗುಡ್ಡ, ಸೋಮಿನ ಕೊಪ್ಪ, ಸವಾಯಿಪಾಳ್ಯ ಸೇರಿದಂತೆ ಹಲವು ಈದ್ಗಾ ಮೈದಾನದಲ್ಲಿ ಹಾಗೂ ಬಡಾವಣೆಗಳ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.


ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೀಶ್, ಕಾಂಗ್ರೆಸ್ ಮುಖಂಡರಾದ ಕೆ.ರಂಗನಾಥ್, ಗಿರೀಶ್, ಪ್ರವೀಣ್ ಮುಸ್ಲಿಂ ಬಾಂಧವರಿಗೆ ಶುಭಕೋರಿದರು.

By admin

ನಿಮ್ಮದೊಂದು ಉತ್ತರ

error: Content is protected !!