ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಸ ಗ್ರಾಮದಲ್ಲಿ ಆಶ್ರಯ ನಿವೇಶನಕ್ಕೆ ಮಂಜೂರಾಗಿದ್ದ ಜಾಗವನ್ನು ಒತ್ತುವರಿ ಮಾಡಿ ತೋಟ ಮಾಡಲಾಗು ತ್ತಿದೆ. ಅಧಿಕಾರಿಗಳಿಗೆ ಸಾಕಷ್ಟು ದೂರು ನೀಡಿದ್ದಾಗ್ಯೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮದ ೫೦೦ಕ್ಕೂ ಹೆಚ್ಚು ಮತದಾರರು ಮತದಾನ ಬಹಿಷ್ಕಾರ ಮಾಡುವ ಮೂಲಕ ನಮ್ಮ ಪ್ರತಿರೋಧವನ್ನು ದಾಖಲಿಸಲು ಚಿಂತನೆ ನಡೆಸಿದ್ದೇವೆ ಎಂದು ಗ್ರಾಮದ ಪ್ರಮುಖರಾದ ಹನುಮಪ್ಪ ಮರಸ ತಿಳಿಸಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಗುತ್ತಿಗೆದಾರ ಮಂಜಪ್ಪ ಮರಸ ಎಂಬುವವರಿಗೆ ತೋಟ ಮಾಡಲು ಕಂದಾಯ ನಿರೀಕ್ಷಕ ವಿನಾಯಕ್ ಮತ್ತು ಸರ್ವೇ ಅಧಿಕಾರಿ ಹನುಮಂತಪ್ಪ ಸಾಥ್ ನೀಡಿದ್ದು, ಕಾನೂನುವ್ಯಾಪ್ತಿ ಮೀರಿ ಆಶ್ರಯ ನಿವೇಶನ ಜಾಗದ ಜೊತೆಗೆ ಸರ್ಕಾರಿ ಜಾಗ ಒತ್ತುವರಿ ಮಾಡಲು ಅವಕಾಶ ನೀಡಿದ್ದಾರೆ. ಅಧಿಕಾರಿಗಳ ಈ ಧೋರಣೆ ಗ್ರಾಮಸ್ಥರು ಖಂಡಿಸುತ್ತಿದ್ದು, ಅನಿವಾರ್ಯವಾಗಿ ಮತದಾನ ಬಹಿಷ್ಕಾರ ಮಾಡುವ ಸ್ಥಿತಿ ಅಧಿಕಾರಿ ವಲಯ ತಂದಿಟ್ಟಿದೆ ಎಂದು ದೂರಿದರು.


೧೯೯೫-೯೬ರಲ್ಲಿ ಮರಸ ಗ್ರಾಮದ ಸರ್ವೇ ನಂ. ೪೪ರಲ್ಲಿ ೧.೧೬ ಎಕರೆ ಜಮೀನು ಭೂಸ್ವಾಧೀನಪ ಡಿಸಿಕೊಂಡು ಒಟ್ಟು ೪೦ ಕುಟುಂಬಗಳಿಗೆ ಆಶ್ರಯ ನಿವೇಶನ ರಚಿಸಿ ಹಕ್ಕುಪತ್ರ ನೀಡಲಾಗಿದೆ. ಕಳೆದ ೨೬ ವರ್ಷಗಳಿಂದ ನಾವು ಗ್ರಾಮ ಪಂಚಾಯ್ತಿಗೆ ಕಂದಾಯ ಕಟ್ಟುತ್ತಾ ಬಂದಿದ್ದೇವೆ ಎಂದರು.


ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಂಜಪ್ಪ, ವೆಂಕಟೇಶ್, ಮಂಜುನಾಥ್, ಹುಚ್ಚಪ್ಪ, ರವಿಕುಮಾರ್, ಹೊನ್ನಪ್ಪ, ಬಸವರಾಜ್, ರಮೇಶ್, ವೀರಭದ್ರ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!