ಶಿವಮೊಗ್ಗ, ಅ.07:
ಕೇಳ್ರಪ್ಪೋ ಕೇಳ್ರಿ….ಶಿವಮೊಗ್ಗ ಮಹಾನಗರ ಪಾಲಿಕೆಯು ಕಳೆದ ಕೆಲ ದಿನದ ಹಿಂದಷ್ಟೆ ನಿರ್ಮಿಸಿದ್ದ ರಸ್ತೆ ಅವಾಂತರ ನೋಡಿದರೆ ಇಡೀ ವ್ಯವಸ್ಥೆಯ ಬಗ್ಗೆ ನಾಚಿಕೆಯಾಗುತ್ತದೆ.
ಇದು ವಿನೋಬನಗರದ ಹುಡ್ಕೋ ದಲ್ಲಿನ ದಾಮೋದರ ಕಾಲೋನಿಯ ಕಾಶೀಪುರ ಮುಖ್ಯ ರಸ್ತೆಯ ಮಗ್ಗುಲಲ್ಲಿನ ಮೊದಲ ತಿರುವಿನಲ್ಲಿ ನಿರ್ಮಾಣವಾದ ರಸ್ತೆ ಕಾಮಗಾರಿ.
ಕಳೆದ ಜೂನ್ ತಿಂಗಳ ಮೊದಲ ವಾರದಲ್ಲಿ ನಿರ್ಮಿಸಿದ ರಸ್ತೆಯ ಸುಂದರ ಚಿತ್ರಣಗಳನ್ನು ನೋಡಿದವನೇ ನಾಚಿಕೊಳ್ಳುವ ಪರಿಸ್ಥಿತಿ ಬರುತ್ತದೆ.

ಇದು ಮೂರು ತಿಂಗಳ ಹಿಂದಾದ ರಸ್ತೆ ನಿರ್ಮಾಣದ ಚಿತ್ರಣ


ಯಾವ ಎಂಜಿನಿಯರ್ ಈ ಕಾಮಗಾರಿಯನ್ನು ನೋಡಿಕೊಂಡನೋ, ಪಾಲಿಕೆಯ ಸದಸ್ಯೆ ಅನಿತಾ ರವಿಶಂಕರ್ ಯಾವಾಗ ಕಾಮಗಾರಿಯನ್ನು ವೀಕ್ಷಿಸಿ ಸರಿಯಾಗಿದೆ ಎಂದು ಹೇಳಿಕೆ ಕೊಟ್ಟರೋ ಭಗವಂತನೇ ಬಲ್ಲ. ಮೂರು ತಿಂಗಳು ಮುಗಿಯುವ ಹೊತ್ತಿನಲ್ಲಿ ಇಡೀ ರಸ್ತೆಯ ಕಲ್ಲುಗಳು ನರ್ತಿಸುತ್ತಿವೆ. ಡಾಂಬರಿನ‌ ಸೊಂಕೇ ಇಲ್ಲಿಲ್ಲ. ಆ ಪುಣ್ಯಾತ್ಮ ಗುತ್ತಿಗೆದಾರ ಅದೇಗೆ ಈ ಕೆಲಸ ಮಾಡಿದನೋ ಎಂದು ಜನರೇ ಪ್ರಶ್ನಿಸುತ್ತಿದ್ದಾರೆ.

ಇದಪ್ಪ ಪಾಲಿಕೆ ಹೊಡ್ತಾ


ಶಿವಮೊಗ್ಗದ ಬಡಾವಣೆಯೊಂದರಲ್ಲಿ ನಿರ್ಮಿಸಿದ ಕೆಲವೇದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹೀಗಾಗಿದೆ. ಮಾಸ್ಕ್ ಧರಿಸದಿದ್ದರೆ ರು. 1000 ದಂಡ ಹಾಕ ಬಹುದಾದರೆ ಈ ರಸ್ತೆ ನಿರ್ಮಾತೃವಿನಗೆ ಎಷ್ಟು ದಂಡ ಹಾಕಬೇಕು? ವ್ಯವಸ್ಥೆಯ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರತಿನಿಧಿಗಳೇ ದಯವಿಟ್ಟು ಉತ್ತರಿಸಿ ಎಂದು ಅಲ್ಲಿನ ನಿವಾಸಿ ಪ್ರಭು ಕೋರಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!