ಸಾಗರ : ಕ್ಷೇತ್ರವ್ಯಾಪ್ತಿಯ ಹಳ್ಳಿಹಳ್ಳಿಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ನಾನು ಯಾವ ಜಾತಿ ಜನಾಂಗವನ್ನು ತುಳಿದಿಲ್ಲ, ತಾರತಮ್ಯ ಮಾಡಿಲ್ಲ. ಈ ನೆಲಗಟ್ಟಿನ ಮೇಲೆಯೇ ಮುಂದಿನ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸುವಂತೆ ಮತದಾರರನ್ನು ವಿನಂತಿಸುತ್ತೇನೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.


ತಾಲೂಕಿನ ಕೇಡಲಸರದ ಯು.ಎಚ್.ನಾರಾಯಣಮೂರ್ತಿ ಅವರ ಮನೆಯ ಅಂಗಳದಲ್ಲಿ ನಡೆದ ಭೀಮನಕೋಣೆ, ಹೆಗ್ಗೋಡು ಹಾಗೂ ಪುರಪ್ಪೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಹಕಾರಿ ಪ್ರಮುಖರು ಹಾಗೂ ಬ್ರಾಹ್ಮಣ ಗಣ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಅವರು ನ

ಮ್ಮ ಐದು ವರ್ಷದ ನಡವಳಿಕೆಯನ್ನು ಈ ಹಿಂದಿನ ಅವಧಿಗಳಿಗೆ ಹೋಲಿಸಿ ತೀರ್ಮಾನಕ್ಕೆ ಬರುವಷ್ಟು ಪ್ರಬುದ್ಧರಾಗಿದ್ದಾರೆ ಎಂದರು.
ರಾಜಕೀಯವಾಗಿ ನಾನು ಮಾತನಾಡಲು ಮುಂದಾಗುವುದಿಲ್ಲ. ಈ ಐದು ವರ್ಷಗಳಲ್ಲಿ ಸಮಗ್ರವಾದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಅದನ್ನು ಮುಂದುವರೆಸುವ ಕೆಲಸವನ್ನು ಮುಂದಿನ ಅವಧಿಯಲ್ಲಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಆಶೀರ್ವಾದ ನನಗೆ ಮುಖ್ಯವಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಸಹಕಾರಿ ಧುರೀಣರಾದ ರಾಜೇಶ್ ಕೆ.ಕೆ., ರಮೇಶ್ ಪಂದ್ರಿ, ಬಿ.ಎಚ್.ರಾಘವೇಂದ್ರ, ವೆಂಕಟಗಿರಿ, ಸುಬ್ರಾವ್ ಶಿರೂಮನೆ, ಬಿ.ಎನ್.ಪ್ರಸಾದ್, ಅಶೋಕ್ ಎಸ್.ಜಿ., ಜಯಪ್ರಕಾಶ್ ಮಳಲಿ, ಬಿ.ಎನ್.ನಾಗರಾಜ, ಕೆ.ಎಂ.ಪ್ರಸನ್ನ, ಹಿರಿಯ ಬಿಜೆಪಿಗ ಕಾಂತ್ರಿ ಗೋವಿಂದರಾವ್, ಉಳ್ಳೂರು ಗಿರಿ, ರಾಜಗೋಪಾಲ ಇನ್ನಿತರರು ಇದ್ದರು

By admin

ನಿಮ್ಮದೊಂದು ಉತ್ತರ

error: Content is protected !!