ಶಿವಮೊಗ್ಗ,ಏ.12:
ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ನಾಯಕನನ್ನು ಕಳೆದುಕೊಂಡಂತಾಗಿದೆ.
ಅಂತೆಯೇ ಭಾರತೀಯ ಜನತಾ ಪಕ್ಷ ಅಭ್ಯರ್ಥಿಯ ವಿಚಾರದಲ್ಲಿ ತನ್ನ ನಿಲುಬನ್ನು ನಿಲುವನ್ನು ಸಾಬೀತುಪಡಿಸಲು ಹಿಂದುಳಿದ ವರ್ಗಗಳ ವ್ಯಕ್ತಿಯ ಹುಡುಕಾಟ ನಡೆಸುವಲ್ಲಿ ವಿಫಲವಾಗಿದೆ ಎನ್ನಲಾಗುತ್ತಿದೆ.


ಈ ಬಗ್ಗೆ ಅವಲೋಕನ ಮಾಡಿದಾಗ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಬಾರಿ ವಿಧಾನಸಭಾ ಚುನಾವಣೆಗೆ ಹಿಂದುಳಿದ ವರ್ಗಗಳ ಪ್ರಮುಖರನ್ನು ಅಂಕಣಕ್ಕೆ ಇಳಿಸಲು ಕಾಣದ ಕೈಗಳು, ಪಕ್ಷದ ಹಿರಿಯ ಮುಖಂಡರುಗಳು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.


ಹಾಲಿ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವ 11 ಜನರಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಹಿಂದುಳಿದ ವರ್ಗಗಳ ನಾಯಕ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಎಲ್ ಸತ್ಯನಾರಾಯಣರಾವ್ ಅವರ ಹೆಸರು ಈಗ ಈ ಪಿಚ್ಚಿನಲ್ಲಿ ಮುಂದೆ ಬಂದಿದೆ ಎನ್ನಲಾಗುತ್ತಿದೆ.
ಹಿಂದುಳಿದ ವರ್ಗ ಗಳ ನಾಯಕ ಈಶ್ವರಪ್ಪ ಅವರ ನಿವೃತ್ತಿಯ ನಡುವೆ ಕಾಂಗ್ರೆಸ್ ಪಕ್ಷ ಇಂತಹದೊಂದು ಹೊಸ ಆಲೋಚನೆ ನಡೆಸಿದೆ ಎಂದು ಬಲ್ಲಮೂಲಗಳು ಹೇಳುತ್ತಿದ್ದು, ಕಡಿಮೆ ಅವಧಿಯಲ್ಲಿ ನಗರಸಭೆಯ ಅಧ್ಯಕ್ಷಗಿರಿ ಹೊತ್ತುಕೊಂಡಿದ್ದ ಎಲ್ ಸತ್ಯನಾರಾಯಣರ ಅಂದು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದು ಈಗ ಲಾಭದಾಯಕ ವಿಷಯವಾಗಿದೆ ಎನ್ನಲಾಗಿದೆ.


ಹಾಗಾಗಿ ಎಲ್ ಸತ್ಯನಾರಾಯಣ ಅವರ ಹೆಸರು ಕಾಂಗ್ರೆಸ್ ಅಂಗಣದ ಟಿಕೆಟ್ ಹೆಸರಿನ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಮೂಲಗಳು ಹೇಳುತ್ತಿವೆ

By admin

ನಿಮ್ಮದೊಂದು ಉತ್ತರ

error: Content is protected !!