ಶುವಮೊಗ್ಗ,ಮಾ.15:
ರಾಜ್ಯದಾದ್ಯಂತ ನಾಳೆ ಬಹುತೇಕ ಕಡೆ ಮಳೆ ಆಗುವ ಸಾಧ್ಯತೆಗಳ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ನಿನ್ನೆ ಶಿವಮೊಗ್ಗ ಹೊರವಲಯದಲ್ಲಿ ಹನಿ ಮಳೆ ಬಿದ್ದಿದೆ.
ಶಿವಮೊಗ್ಗ ಹೊರವಲಯದ ತ್ಯಾಜ್ಯವಳ್ಳಿ, ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ ಭಾಗದಲ್ಲಿ ನಿನ್ನೆ ಸಂಜೆ ಐದು ಗಂಟೆಯ ಹೊತ್ತಿಗೆ ಸಾಧಾರಣ ಹನಿ ಹನಿ ಮಳೆ ಬಿದ್ದಿದ್ದು, ಗುಡುಗು ಹಾಗೂ ಮಿಂಚಿನ ಅಬ್ಬರ ಜೋರಾಗಿತ್ತು. ಗಾಳಿಯ ರವಸಕ್ಕೆ ಮಳೆ ನಿರೀಕ್ಷಿಯಂತೆ ಬಿದ್ದಿಲ್ಲ ಎಂದು ಹೇಳಲಾಗುತ್ತದೆ.
ರಾಜ್ಯದ ವರದಿ
ರಾಜ್ಯದ ಕರಾವಳಿ,ಉತ್ತರ ಒಳನಾಡು, ದಕ್ಷಿಣ ಒಳನಾಡು, ಸೇರಿದಂತೆ ಹಲವೆಡೆ ನಾಳೆಯಿಂದ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಗದಗ, ಹಾವೇರಿ, ಕೊಪ್ಪಳ, ಚಾಮರಾಜನಗರ, ದಾವಣಗೆರೆ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಭಾರಿ ಮಳೆಯನ್ನು ಕಾಣಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ರಾಜದಾನಿ ಬೆಂಗಳೂರು ಸೇರದಂತೆ ಹಲವೆಡೆ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣ ಕಾಣಿಸಿಕೊಳ್ಳದೆ ಎನ್ನಲಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಮಾರ್ಚ್ 17 ರಿಂದ ಸಾಧಾರಣ ಹಾಗೂ ಭಾರಿ ಮಳೆ ಆಗುವ ಸಾಧ್ಯತೆಗಳ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.