sಸ್ಮಾರ್ಟ್ ಸಿಟಿ ಅವಾಂತರಕ್ಕೆ ನಗರದ ಬಾಲರಾಜ್ ಅರಸ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ಯುಜಿಡಿ ಹಾಗೂ ಯುಜಿ ಕೇಬಲ್ ಮತ್ತು ಪೈಪ್‌ಲೈನ್‌ಗಳ ಮ್ಯಾನ್‌ಹೋಲ್‌ಗಳ ಮುಚ್ಚಳ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅನಾಹುತಕ್ಕೆ ಬಾಯ್ದೆರೆದು ನಿಂತಿವೆ.


ಇತ್ತೀಚೆಗಷ್ಟೇ ರಸ್ತೆ ಕಾಮಗಾರಿಗಳು ಪ್ರಮುಖ ರಸ್ತೆಗಳಲ್ಲಿ ಪೂರ್ಣಗೊಂಡಿದ್ದರೂ ಸಹ ಸ್ಮಾರ್ಟ್ ಸಿಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಾಯಕ್ಕೆ ಮುನ್ನುಡಿ ಬರೆದಿದೆ. ಯುಡಿಜಿ ಮ್ಯಾನ್‌ಹೋಲ್‌ಗಳು ರಸ್ತೆಗಿಂತ ಅರ್ಧ ಅಡಿ ಎತ್ತರದಲ್ಲಿದ್ದು, ಬೀದಿ ದೀಪಗಳು ಕೂಡ ಇಲ್ಲದೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಮ್ಯಾನ್‌ಹೋಲ್ ಮುಚ್ಚಳಗಳ ತಡೆಯಿಂದಾಗಿ ಬಿದ್ದು ಆಸ್ಪತ್ರೆ ಪಾಲಾಗುತ್ತಿದ್ದಾರೆ.

ಕೆಲವೆಡೆ ಮುಚ್ಚಳಗಳು ಅರ್ಧ ಅಡಿ ಆಳಕ್ಕಿಳಿದಿವೆ. ಸಾವಿರಾರು ವಿದ್ಯಾರ್ಥಿಗಳು, ವೃದ್ಧರು ಓಡಾಡುವ ಈ ಪ್ರಮುಖ ರಸ್ತೆಗಳಲ್ಲಿ ಅಪಾಯಕಾರಿ ಹೊಂಡಗಳನ್ನು ಕೂಡಲೇ ಸರಿಪಡಿಸಬೇಕಾಗಿದೆ. ಯುಜಿ ಕೇಬಲ್ ಅವಳಡಿಸಿದ ನಂತರ ಕೆಲವೆಡೆ ಕಂಬಗಳನ್ನು ಕಿತ್ತಿದ್ದು,

ಕಿತ್ತ ಜಾಗದಲ್ಲಿ ಕೂಡ ಯಥಾಸ್ಥಿತಿ ಬಿಟ್ಟು ಹೋಗಿದ್ದು, ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿದ್ದಾರೆ. ರಸ್ತೆಯ ಮೂಲೆಗಳಲ್ಲಿ ಕೇಬಲ್‌ಗಳು ನೇತಾಡುತ್ತಿದ್ದು, ಕೆಲವೆಡೆ ಈಗಾಗಲೇ ವಿದ್ಯುತ್ ಸಂಪರ್ಕ ಕೂಡ ನೀಡಲಾಗಿದ್ದು, ದೊಡ್ಡ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!