ಶಿವಮೊಗ್ಗ: ಕಾಸಿನ ಸರ ಚಲನಚಿತ್ರವು ರೈತರ ಸಮಸ್ಯೆಗಳನ್ನು ಎಳೆಎಲೆಯಾಗಿ ಬಿಚ್ಚಿಡುತ್ತದೆ. ರೈತಹೋರಾಟಗಾರರು ಮತ್ತು ರೈತರು ನೋಡಲೇಬೇಕಾದ ಸಿನಿಮಾ ಇದು ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅಭಿಪ್ರಾಯ ಪಟ್ಟಿದ್ದಾರೆ.


ಅವರು ಕಾಸಿನ ಸರ ಸಿನಿಮಾವನ್ನು ತಮ್ಮ ಕುಟುಂಬ ಹಾಗೂ ರೈತಸಂಘದ ಪದಾಧಿಕಾರಿಗಳೊಂದಿಗೆ ವೀಕ್ಷಿಸಿ ನಂತರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾಸಿನ ಸರ ಸಿನಿಮಾ ವಿಶೇಷವಾಗಿ ರೈತರ ಇಂದಿನ ಪರಿಸ್ಥಿತಿಯನ್ನು ತಿಳಿಸುತ್ತದೆ. ವಿದೇಶಿ ಕಂಪನಿಗಳು ರಾಜಕಾರಣಿಗಳ ಮೂಲಕ ಭೂಮಿಯನ್ನು ಹೇಗೆ ಕಬಳಿಸುತ್ತಾರೆ ಮತ್ತು ರೈತರು ಚಳುವಳಿಯ ಮೂಲಕ ಅದನ್ನು ಹೇಗೆ ವಾಪಾಸು ಪಡೆಯಬಹುದು ಎಂದು ಈ ಸಿನಿಮಾದಲ್ಲಿ ತೋರಿಸಲಾಗಿದೆ.


ರೈತಚಳುವಳಿಯು ಬಹದೊಡ್ಡ ಶಕ್ತಿಯಾಗಿದೆ. ಈ ಶಕ್ತಿಯ ಜೊತೆಗೆ ಸಾವಯವ ಕೃಷಿಯ ಮಹತ್ವ, ಕೌಟುಂಬಿಕ ಸಮಸ್ಯೆಗಳಿಂದ ಛಿದ್ರವಾದ ಕುಟುಂಬ ಮತ್ತೆ ಒಂದುಗೂಡುವುದು, ರೈತಮುಖಂಡರ ಕಷ್ಟ ಕಾರ್ಪಣ್ಯಗಳನ್ನು ಸೂಕ್ಷ್ಮವಾಗಿ ಇದರಲ್ಲಿ ಚಿತ್ರಿಸಲಾಗಿದೆ. ಜೊತೆಗೆ ಹಳ್ಳಿಯ ಬದುಕು ಅಲ್ಲಿನ ಸಂಸ್ಕೃತಿ, ರೈತರು ಬದುಕುತ್ತಿರುವ ರೀತಿಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ ಎನ್ನುತ್ತಾರೆ.


ಚಿತ್ರದ ನಿರ್ದೇಶಕ ನಂಜುಂಡೇಗೌಡರು ಕೂಡ ರೈತ ಹೋರಾಟದಿಂದಲೇ ಬಂದವರಾಗಿದ್ದಾರೆ ಈಹಿಂದೆಯೂ ಕೂಡ ರೈತರ ಬದುಕು ಹೋರಾಟಕ್ಕೆ ಸಂಬಂಧಿಸಿದಂತೆ ಹಲವು ಕಿರುಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಹೆಬ್ಬೆಟ್ಟು ರಾಮಕ್ಕ, ನೋಡು ಬಾ ನಮ್ಮೂರ ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ದೊರಕಿದೆ. ರೈತರು, ರೈತಹೋರಾಟಗಾರರು ಈ ಸಿನಿಮಾ ವೀಕ್ಷಿಸುವುದರ ಮೂಲಕ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಬಹುದಾಗಿದೆ ಎಂದಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!