ಶಿವಮೊಗ್ಗ, ಮಾ.09:
ಆಕಸ್ಮಿಕವಾಗಿ ವಿದ್ಯುತ್ ಅಪಘಾತದಿಂದ ನಿಧನ ಹೊಂದಿದ ಮೆಸ್ಕಾಂ ಪವರ್ ಮ್ಯಾನ್ ಹಾಗೂ ಗುತ್ತಿಗೆ ನೌಕರರ ಸರಣಾರ್ಥ ಅವರ ಆತ್ಮಕ್ಕೆ ಶಾಂತಿ ಕೋರುವ ಉದ್ದೇಶದಿಂದ ಇಲ್ಲಿನ ಹೆಚ್. ಬಿ. ಈರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಎಜುಕೇಶನ್ ಟ್ರಸ್ಟ್ “ಪವರ್ ಕಪ್” ಕ್ರಿಕೆಟ್ ಪಂದ್ಯಾವಳಿಯನ್ನು ಬರುವ ಮಾರ್ಚ್ 11 ರಿಂದ ಎರಡು ದಿನಗಳ ಕಾಲ ಶಿವಮೊಗ್ಗ ಜೆಎನ್ ಸಿಸಿ ಕಾಲೇಜ್ ಆವರಣದ ಕ್ರೀಡಾಂಗಣದಲ್ಲಿ ಆಯೋಜಿಸಿದೆ.
ತುಂಗಾ ತರಂಗ ದಿನಪತ್ರಿಕೆ ಸಹ ಆಶ್ರಯದಲ್ಲಿ ನಡೆಯುತ್ತಿರುವ ಈ ಕ್ರಿಕೆಟ್ ಪಂದ್ಯಾವಳಿಯ ಆರಂಭದ ಹಾಗೂ ಅಂತಿಮ ಹಂತದ ಸಮಾರಂಭಗಳಲ್ಲಿ ಮೃತ ಪವರ್ ಮ್ಯಾನ್ ಗಳ ಕುಟುಂಬದವರನ್ನು ಗೌರವಿಸುವ ಹಾಗೂ ಅವರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆಯೋಜಿತ ಸುಮಾರು 18 ತಂಡಗಳು ಶಿವಮೊಗ್ಗ ಜಿಲ್ಲೆಯ ಎಲ್ಲಾ ವಲಯಗಳ ಮೆಸ್ಕಾಂ ವಿಭಾಗದಿಂದ ಆಗಮಿಸಲಿದ್ದು ಪ್ರಥಮ ಬಹುಮಾನ 15001 ಹಾಗೂ ಟ್ರೋಪಿ, ದ್ವಿತೀಯ ಬಹುಮಾನ 10000 ಹಾಗೂ ಟ್ರೋಫಿ, ತೃತೀಯ ಬಹುಮಾನ 5000 ನಗದನ್ನು ಹೊಂದಿದ್ದು ಸರಣಿ ಶ್ರೇಷ್ಠ, ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್ಮನ್, ಉತ್ತಮ ಪೀಲ್ಡರ್ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಶಿವಮೊಗ್ಗ ವೃತ್ತ ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿ, ನೌಕರರಿಗೆ ಮತ್ತು ಅಧಿಕೃತ ಗುತ್ತಿಗೆದಾರರಿಗೆ ಆಟವಾಡುವ ಅವಕಾಶವಿದ್ದು ಪ್ರತಿ ಉಪ ವಿಭಾಗದ ಒಂದು ತಂಡಕ್ಕೆ ಅವಕಾಶ ನೀಡಲಾಗಿದೆ.
ಒಂದು ತಂಡದಲ್ಲಿ ಆಡಿದ ಆಟಗಾರ ಮತ್ತೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ. ಸಮಯದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಪ್ರಸಕ್ತ 15 ವರ್ಷಗಳಿಂದ ಈರಪ್ಪ ಟ್ರಸ್ಟ್ ರಕ್ತದಾನ, ಆರೋಗ್ಯ ಶಿಬಿರ, ನೇತ್ರದಾನ ಶಿಬಿರ, ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ಹಂಚಿಕೆ, ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಂತಹ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.
ಬರುವ ಮಾರ್ಚ್ ಹನ್ನೊಂದರ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಪವರ್ ಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಮೆಸ್ಕಾಂನ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಗಣ್ಯರು ಆಗಮಿಸಿದ್ದಾರೆ.