ಭದ್ರಾವತಿ/ದಾವಣಗೆರೆ,ಮಾ.9:
ವೃತ್ತಿ ಬದುಕಿನಲ್ಲಿ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಹಾಗೂ ಡಯಟ್ ವಿಜ್ಞಾನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಬಿ.ಎಸ್. ಸಿದ್ದರಾಮಪ್ಪ ಅವರು ಇಂದು ದಾವಣಗೆರೆಯ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಸುಮಾರು 35 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಗಣಿತ ಹಾಗೂ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅವರು ಅಪಾರ ಶಿಷ್ಯ ವೃಂದವನ್ನು ಹೊಂದಿದಂತಹವರು.
ಚನ್ನಗಿರಿ ಮೂಲದ ಬಿಲ್ಲಳ್ಳಿಯ ಮೂಲ ನಿವಾಸಿಯಾದ ಬಿ.ಎಸ್.ಸಿದ್ದರಾಮಪ್ಪ ಅವರು ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ದಕ್ಷಿಣ ಕನ್ನಡ, ಭದ್ರಾವತಿಯಲ್ಲಿ ಸೇವೆ ಸಲ್ಲಿಸಿ, ನಂತರ ದಾವಣಗೆರೆಯ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಂತಹವರು. ಈ ನಡುವೆ ವಿಶೇಷ ಡಿಇಡಿ ಕಾಲೇಜುಗಳ ಜವಾಬ್ದಾರಿಯನ್ನು ಭದ್ರಾವತಿ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲು ಸೂಚಿಸಿದಾಗ ಅಲ್ಲಿ ಗಣಿತ ಹಾಗೂ ಮನಶಾಸ್ತ್ರದ ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದಂತಹವರು.


ಮೃತರ ಪುತ್ರರಲ್ಲಿ ಓರ್ವರು ಲಂಡನ್ ನಲ್ಲಿ ವಾಸವಿದ್ದು, ಮತ್ತೂಬ್ಬರು ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಳೆ ಮಧ್ಯಾಹ್ನ ಮೃತರ ಅಂತ್ಯ ಕ್ರಿಯೆ ಅವರ ಸ್ವಗ್ರಾಮವಾದ ಚನ್ನಗಿರಿ ತಾಲೂಕಿನ ಬಿಲ್ಲಳ್ಳಿಯಲ್ಲಿ ನಡೆಯಲಿದೆ.
ಮೃತರ ನಿಧನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ಧೇಶಕ ಜಿ.ಲೋಹಿತ್, ಶಂಕರಘಟ್ಟ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಶ್ವರಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಸ್. ಹೆಚ್. ಕೃಷ್ಣಮೂರ್ತಿ ಹಾಗೂ ಅಪಾರ ಶಿಷ್ಯ ವೃಂದ ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿದೆ. ಹಾಗೂ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸಿದೆ.
ಮೃತರ ನಿಧನಕ್ಕೆ ತುಂಗಾತರಂಗ ದಿನಪತ್ರಿಕೆ ಬಳಗ ಕಂಬನಿ ಮಿಡಿದಿದೆ.

/

By admin

ನಿಮ್ಮದೊಂದು ಉತ್ತರ

error: Content is protected !!