ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಮಹಿಳೆಯರಿಗೆ ಕ್ರೀಡಾಕೂಟ


ಶಿವಮೊಗ್ಗ, ಮಾ. 04: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಾರ್ಚ್-08 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಾ. 07 ಮತ್ತು 08 ರಂದು ಜಿಲ್ಲೆಯ ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಮಾ. 07 ರಂದು ಕ್ರೀಡಾ ಸ್ಪರ್ಧೆಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್, ಥ್ರೋಬಾಲ್, ಫುಟ್‍ಬಾಲ್, ಕಬಡ್ಡಿ, ಷಟಲ್ ಬ್ಯಾಡ್ಮಿಂಟನ್, ಟೆನ್ನಿಸ್ ಸಿಂಗಲ್ ಕ್ರೀಡೆಗಳನ್ನು ಆಯೋಜಿಸಲಾಗಿದೆ.


ಮಾ. 08 ರಂದು ಅಥ್ಲೇಟಿಕ್ (100 ಮೀ, 200 ಮೀ, 400ಮೀ, 800ಮೀ, ಉದ್ದ ಜಿಗಿತ ಮತ್ತು ಗುಂಡು ಎಸೆತ), ಹಗ್ಗಜಗ್ಗಾಟ, ಯೋಗಾಸನ ಮನೋರಂಜನಾ ಕ್ರೀಡೆಗಳಾದ ಗೋಣಿಚೀಲ ಓಟ, ಇಟ್ಟಿಗೆ ನಡಿಗೆ, ಬಾಂಬ್ ಇನ್‍ದಿ ಸಿಟಿ, ನಿಧಾನ ಸೈಕಲ್ ರೇಸ್, ಪಗಡೆ ಕ್ರಿಕೆಟ್ ಹಾಗೂ ಭೌದ್ಧಿಕ ಸ್ಫರ್ದೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಿಲಾಗಿದೆ.
ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮಾ. 07ರಂದು ಬೆಳಗ್ಗೆ 9.30ಕ್ಕೆ ನೋಂದಾವಣೆ ಮಾಡಿಕೊಳ್ಳುವುದು. ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ, ದೂ.ಸಂ.: 08182-223328 ನ್ನು ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ವಿ.ಸೂ.:ಮಹಿಳಾ ದಿನಾಚರಣೆ ಪ್ರಯುಕ್ತ ಮಾ. 08 ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ವ್ಯಾಪ್ತಿಗೆ ಒಳಪಡುವ ಎಲ್ಲಾ ಜಿಮ್, ಟೆನ್ನಿಸ್ ಅಂಕಣ, ಈಜುಕೊಳ ಹಾಗೂ ಷಟಲ್ ಬ್ಯಾಡ್ಮಿಂಟನ್ ಅಂಕಣಗಳನ್ನು ಮಹಿಳೆಯರಿಗೆ ಷರತ್ತಿಗೊಳಪಟ್ಟು ಬೆಳಗ್ಗೆ 09.00 ರಿಂದ ಸಂಜೆ 5.00ರವರೆಗೆ ಉಚಿತವಾಗಿ ನೀಡಲಾಗುವುದು.

ಶಿವಮೊಗ್ಗದಲ್ಲಿ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ., ಸಾರ್ವಜನಿಕರ ಸಹಕಾರಕ್ಕೆ ಪಾಲಿಕೆ ಮನವಿ https://tungataranga.com/?p=18600 ಸಂಪೂರ್ಣ ಸುದ್ದಿ ಓದಲು ಲಿಂಕ್ ಬಳಸಿ

By admin

ನಿಮ್ಮದೊಂದು ಉತ್ತರ

error: Content is protected !!