ಶಿವಮೊಗ್ಗ,
ನಗರದ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಇಂದು ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಡಾ.ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರತಂಡ ವಿದ್ಯಾರ್ಥಿನಿಯರು ಮತ್ತು ಮಹಿಳೆಯ ರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿತು.


ಈ ಸಂದರ್ಭದಲ್ಲಿ ನಿರ್ದೇಶಕ ಹರ್ಷ ಅವರು ಮಾತನಾಡಿ, ಈ ಚಿತ್ರ ಶಿವಣ್ಣನವರ ೧೨೫ನೇ ಚಿತ್ರವಾಗಿದ್ದು, ಮೋಹನ್‌ಕುಮಾರ್ ಅವರು ಹಾಡಿದ ಗೀತೆ ಯಶಸ್ವಿಯಾಗಿದೆ. ಈ ಚಿತ್ರದ ಹಿರೋಯಿನ್ ಗಾನವಿಲಕ್ಷ್ಮೀ ಮತ್ತು ಸಾಗರದ ಅರುಣ್‌ಪ್ರಸಾದ್ ಅವರ ಪುತ್ರಿ ಅದಿತಿಯವರ ನಟನೆ ಪ್ರೇಕ್ಷಕರ ಮನಗೆದಿದ್ದು, ಮಹಿಳೆಯರ ಸಮಸ್ಯೆಗಳ ಬಗ್ಗೆ ಈ ಚಿತ್ರ ಗಮನ ಸೆಳೆದಿದ್ದು, ಅಭೂತಪೂರ್ವ ಯಶಸ್ಸು ಕಾಣುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಪ್ರಶ್ನೆಗಳ ಸುರಿ ಮಳೆಯೇ ಬಂತು. ಹಲವರು ಈ ಚಿತ್ರವನ್ನು ಹೊಗಳಿದರು. ಪ್ರಪ್ರಥಮ ಬಾರಿಗೆ ಅತ್ಯುತ್ತಮ ಕಥಾಹಂದರ ಹೊಂದಿರುವ ಈ ಚಿತ್ರ ಮಹಿಳೆಯರಿಗೆ ಧೈರ್ಯ ಸ್ಥೈರ್ಯ ತುಂಬಿದೆ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ಚಿತ್ರದ ಹಿರೋಯಿನ್ ಪುಪ್ಪ ಕ್ಯಾರೆಕ್ಟರ್ ಮಗಳು ಅದಿತಿ ಹಾಗೂ ತಂದೆ ಶಿವರಾಜ್ ಕುಮಾರ್ ಅವರ ಪಾತ್ರಗಳು ಯಶಸ್ವಿಯಾ ಗಿದೆ. ಮಗಳಿಗೆ ತಂದೆಯ ಬೆಂಬಲ ಯಾವರೀತಿ ಇರಬೇಕು ಎಂಬುದನ್ನು ತೋರಿಸಿದೆ. ಅನ್ಯಾಯದ ವಿರುದ್ಧ ನ್ಯಾಯ ಕೊಡಿಸುವ ತಾಯಿಯ ಪಾತ್ರ ಗಮನಸೆಳೆದಿದೆ. ಚಿತ್ರದಲ್ಲಿ ಹೆಣ್ಣು ಮಕ್ಕಳು ತನ್ನ ಗಟ್ಟಿತನವನ್ನು ತೋರಿಸಿದ್ದಾರೆ ಎನ್ನುವುದು ಅನೇಕರ ಅಭಿಪ್ರಾಯವಾಗಿತ್ತು. ಎಲ್ಲಾ ಪಾತ್ರಗಳು ಚಿತ್ರಕ್ಕೆ ಜೀವ ತುಂಬಿದೆ ಮತ್ತು ಅದರ ಹಿಂದೆ ಕಲಾವಿದರಲ್ಲದೆ ಇಡೀ ಚಿತ್ರ ತಂಡದ ಶ್ರಮ ಎದ್ದು ಕಾಣುತ್ತಿದೆ ಎಂದರು.


ಶಿವಣ್ಣ ಮಾತನಾಡಿ, ಹಣೆಬರಹ ಬದಲಾಯಿಸಲು ಸಾಧ್ಯವಿಲ್ಲ. ವ್ಯವಸ್ಥೆ ಬದಲಾವಣೆ ಕೂಡ ಕಷ್ಟ, ಸರ್ಕಾರಗಳು ಆಡಿದ ಮಾತನ್ನೇ ಮಾಯ ಮಾಡುತ್ತದೆ. ಏಕೆ ಎಂದು ಗೊತ್ತಾಗುತ್ತಿಲ್ಲ. ನಾವೇ ಸರಿಯಾಗಬೇಕು. ನಾವು ನೋಡುವ ದೃಷ್ಟಿ ಸರಿಯಿಲ್ಲವಾದರೆ ಭಾವನೆಗಳಿಗೆ ಅರ್ಥವಿಲ್ಲ ದಂತಾಗುತ್ತದೆ. ನೋಡುವ ನೋಟ ಚೆನ್ನಾಗಿರಬೇಕು. ಈ ಚಿತ್ರದಲ್ಲಿ ಅದ್ಬುತವಾಗಿ ಡ್ಯಾನ್ಸ್ ಮೂಡಿ ಬಂದಿದೆ. ಕಾಲಿಗೆ ಚಪ್ಪಲಿ ಹಾಕದೆ ಡ್ಯಾನ್ಸ್ ಮಾಡಿದಾಗ ಕಾಲಿನ ಕೆಳಗೆ ಗುಳ್ಳೆ ಬಂದಿತ್ತು. ಆದರೂ ನಿರ್ದೇಶಕರ ಅಣತಿಯಂತೆ ಮೈಚಳಿ ಬಿಟ್ಟು ಎಲ್ಲರೂ ಅಭಿನಯಿಸಿದ್ದಾರೆ. ಕಥೆ ಉತ್ತಮವಾಗಿತ್ತು. ಆದ್ದರಿಂದ ಸೊಗಸಾಗಿ ಮೂಡಿಬಂದಿದೆ. ಈಡೀ ಚಿತ್ರತಂಡ ಶ್ರಮಪಟ್ಟಿದೆ ಎಂದರು.


ಪತ್ರಕರ್ತ ಜೇಸುದಾಸ್ ಮಾತನಾಡಿ, ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಕಥೆಯ ಕಾವಲುಗಾರ ಅಷ್ಟೆ. ನಿಜವಾದ ಹಿರೋಗಳು ಚಿತ್ರದಲ್ಲಿ ಕನಕ ಮತ್ತು ಪುಷ್ಪ ಆಗಿದ್ದಾರೆ ಎಂದರು.
ಈಡೀ ಚಿತ್ರಕ್ಕೆ ಸಂವಾದದಲ್ಲಿ ಹೊಗಳಿಕೆಯ ಮಹಾಪೂರವೇ ಹರಿದು ಬಂತು. ಈ ಸಂದರ್ಭದಲ್ಲಿ ಡಿವಿಎಸ್ ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಮಾಜಿ ಶಾಸಕ ಎಸ್.ಮಧು ಬಂಗಾರಪ್ಪ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!