:ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಡೇ-ನಲ್ಮ್ ಯೋಜನೆಯಡಿ ಪಿ.ಎಂ. ಸ್ವಾನಿಧಿ ಮಹೋತ್ಸವ ಕಾರ್ಯಕ್ರಮವನ್ನು ಡಾ|| ಬಿ.ಆರ್.ಅಂಬೇಡ್ಕರ್ ಭವನ ಆವರಣದಲ್ಲಿ ಡಿ.೧೯ ರಿಂದ ಡಿ.೨೪ ರವರೆಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಕೂಟವನ್ನು ಏರ್ಪಸಿದೆ.


ಡಿ.೧೯ ರಂದು ಬೆಳಗ್ಗೆ ೯ ರಿಂದ ಮಹಿಳೆ ಮತ್ತು ಪುರು?ರಿಗೆ ವಿವಿಧ ಕ್ರೀಡೆಗಳಾದ ಹಗ್ಗಜಗ್ಗಾಟ, ರಂಗೋಲಿ ಸ್ಪರ್ಧೆ, ಸಂಗೀತ ಕುರ್ಚಿ. ಪುರು?ರಿಗೆ ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಫಾಸ್ಟ್‌ವಾಕ್. ವ್ಯಾಪಾರಸ್ಥರ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರಕಲೆ ಮತ್ತು ಕಪ್ಪೆಜಿಗಿತ ಸ್ಪರ್ಧೆಗಳು. ಪ್ರೌಢಶಾಲೆ ಮಕ್ಕಳಿಗೆ ರಾ? ನಾಯಕರ ಛದ್ಮವೇ? ಸ್ಪರ್ಧೆ, ೧೦೦ ಮೀ ಓಟ. ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ೧೦೦ ಮೀ. ಓಟ ಸ್ಪರ್ಧೆಗಳು.


ಡಿ.೨೦ ರಂದು ಬೆಳಗ್ಗೆ ೯.೦೦ಕ್ಕೆ ಮಹಿಳೆಯರು ಮತ್ತು ಪುರು?ರು ಹಾಗೂ ಮಕ್ಕಳಿಗೆ ದೇಶಭಕ್ತಿ ಗಾಯನ ಸ್ಪರ್ಧೆ.
ಈ ಕ್ರೀಡೆಗಳಲ್ಲಿ ಭಾಗವಹಿಸಲು ಬೀದಿಬದಿ ಗುರುತಿನ ಚೀಟಿ/ಮಾರಾಟ ಪ್ರಮಾಣ ಪತ್ರ/ ಸಾಲ ಪಡೆದಿರುವ ಬ್ಯಾಂಕ್ ಪಾಸ್ ಪುಸ್ತಕ/ಎ??ಓಆರ್ ಪತ್ರ ಮತ್ತು ಮಕ್ಕಳ ಶಾಲಾ ವ್ಯಾಸಂಗ ದೃಢೀಕರಣ ಪತ್ರಗಳನ್ನು ಕಡ್ಡಾಯವಾಗಿ ತರಕ್ಕದ್ದು.


ಬೀದಿಬದಿ ವ್ಯಾಪಾರಿಗಳಿಗೆ ಉಚಿತ ಸ್ಟಾಲ್: ದಿ:೨೪/೧೨/೨೦೨೨ ರಂದು ಬೆಳಗ್ಗೆ ೯.೦೦ ರಿಂದ ಸಂ.೬.೦೦ರವರೆಗೆ ನಡೆಯುವ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮೊದಲು ಬಂದ ೧೫ ಬೀದಿಬದಿ ವ್ಯಾಪಾರಿಗಳಿಗೆ ಉಚಿತ ಸ್ಟಾಲ್ ನೀಡಲಾಗುವುದು.


ಸ್ವ ನಿಧಿಯ ಸಾಲ ಮೇಳ: ದಿ:೨೪/೧೨/೨೦೨೨ ರಂದು ಸ್ವ ನಿಧಿಸೇ ಸಮೃದ್ಧಿ ಯೋಜನೆಯಡಿ ಸ್ಥಳದಲ್ಲೇ ವ್ಯಾಪಾರಿಗಳಿಗೆ ಸಾಲ ನೀಡಲಾಗುವುದು. ಅಂದ ವಿಜೇತ ಕ್ರೀಡಾಪಟುಗಳಿಗೆ ಗಣ್ಯರಿಂದ ಬಹುಮಾನ ವಿತರಣೆಯನ್ನು ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆ, ಇಲ್ಲಿ ನೀಡಲಾಗುವುದು.ಬೀದಿಬದಿ ಕುಟುಂಬಸದಸ್ಯರು ಸ್ವಾನಿಧಿ ಮಹೋತ್ಸವ ಹಬ್ಬದಲ್ಲಿ ತಪ್ಪದೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳುಸುವಂತೆ ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!