ಶಿವಮೊಗ್ಗ,
ಜಿಲ್ಲಾ ತರಬೇತಿ ಕೇಂದ್ರ ಶಿವಮೊಗ್ಗ ಇಲ್ಲಿ ನ.೧೬ ರಿಂದ ೧೮ ರವರೆಗೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ಪ್ರಥಮ ಪ್ರತಿಕ್ರಿಯಾ ತರಬೇತಿ(ಫಸ್ರ್ಟ್ ರೆಸ್ಪಾಂಡರ್ ಟ್ರೈನಿಂಗ್) ಏರ್ಪಡಿಸಲಾಗಿತ್ತು.
ಕಾಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವಿಕ್ರಮ ಆಮ್ಟೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಪಾಯದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯಂತಹ ಕ್ರಮಗಳನ್ನು ಕೈಗೊಳ್ಳುವು ದರಿಂದ ಸಂಭವಿಸಬಹುದಾದ ವಿಪತ್ತನ್ನು ತಡೆಗಟ್ಟಬ ಹುದು.
ಹೃದಯಾಘಾತವಾದ ಒಂದು ಗಂಟೆಯೊಳಗೆ ಪ್ರಥಮ ಚಿಕಿತ್ಸೆ ಮಾಡಿದರೆ ವ್ಯಕ್ತಿಯ ಜೀವವನ್ನು ಉಳಿಸಬಹುದು. ಈ ಸಮಯವನ್ನು ‘ಗೋಲ್ಡನ್ ಅವರ್’ ಎನ್ನುತ್ತಾರೆ. ಒಂದು ಜೀವ ಉಳಿಸಬಹುದಾದ, ವಿಪತ್ತಿನಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆಯ ವಿವಿಧ ವಿಧಾನಗಳ ಬಗ್ಗೆ ಈ ತರಬೇತಿ ಶಿಬಿರದಲ್ಲಿ ತಿಳಿಸಿಕೊಡ ಲಾಗುತ್ತದೆ. ಪ್ರಶಿಕ್ಷಣಾರ್ಥಿಗಳು ಈ ಬಗ್ಗೆ ಆಸಕ್ತಿಯಿಂದ ತರಬೇತಿ ಪಡೆದು, ತಮ್ಮ ದಿನನಿತ್ಯದ ಕರ್ತವ್ಯಗಳಲ್ಲಿ ಈ ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂದ ಅವರು ಇದೊಂದು ಉತ್ತಮ ತರಬೇತಿಯಾಗಿದೆ ಎಂದರು.
ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಕಿರಣ್.ಎಸ್.ಕೆ ಮಾತನಾಡಿ, ನಮ್ಮ ತರಬೇತಿ ಕೇಂದ್ರದಿಂದ ಏರ್ಪಡಿಸಿರುವ ಪ್ರಥಮ ಪ್ರತಿಕ್ರಿಯಾ ತರಬೇತಿಯು ವಿವಿಧ ಇಲಾಖೆಗಳ ಸಿಬ್ಬಂದಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಗೃಹ ರಕ್ಷಕ ದಳದ ಸದಸ್ಯರು, ಡ್ರೈವರ್ ಮತ್ತು ಕಂಡಕ್ಟರ‍್ಗಳು, ಕ್ರೀಡಾ ತರಬೇತಿದಾರರು ಇವರೆಲ್ಲರಿಗೂ ಬಹಳ ಉಪಯುಕ್ತವಾಗಿದ್ದು, ಅವರವರ ಕರ್ತವ್ಯದ ಸ್ಥಳಗಳಲ್ಲಿ
ಕರ್ತವ್ಯ ನಿರ್ವಹಿಸುವಾಗ, ಆಗಬಹುದಾದ ಅಪಾಯಕರ ಹಾಗೂ ಜೀವ ಹಾನಿಯಂತಹ ಘಟನೆಗಳನ್ನು ಸುಗಮವಾಗಿ ನಿರ್ವಹಿಸಲು ಅತಿ ಉಪಯುಕ್ತವಾಗಿದೆ. ನಾವೆಲ್ಲರು ಒಂದಲ್ಲ ಒಂದು ರೀತಿಯಲ್ಲಿ ಇತಂಹ ಘಟನೆಗಳನ್ನು ನೋಡುತ್ತಿದ್ದು ಪರಿಹಾರ ವಿಧಾನಗಳ ಬಗ್ಗೆ ತಿಳಿದುಕೊಂಡಿದ್ದರೆ ಅಂತಹ ಸಮಯದಲ್ಲಿ ಅಮೂಲ್ಯವಾದ ಜೀವವನ್ನು ಉಳಿಸಬಹುದು. ತಾವೆಲ್ಲರೂ ಈ ತರಬೇತಿಯ ಅಂಶಗಳನ್ನು ಮನಗಂಡು ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖರಾಗಬೇಕಾಗಿ ಕೋರುತ್ತೇನೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತನಾಡಿದರು.
ವೈದ್ಯಾಧಿಕಾರಿಗಳಾದ ಡಾ.ವಿನಯ್, ದೀಕ್ಷಿತ್ ಮತ್ತು ಗೀತಾ ನಿಂಬಾಳ ತರಬೇತುದಾರರಾಗಿ ೩ ದಿನಗಳ ತರಬೇತಿಯಲ್ಲಿ ಕಾರ್ಯ ನಿರ್ವಹಿಸಿದರು. ೧೮೦ ಜನರು ತರಬೇತಿ ಪಡೆದುಕೊಂಡರು.