ಶಿವಮೊಗ್ಗ,
ಸುಷ್ಮಾ ಫೌಂಡೇಷನ್ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪೌಂಡೇಷನ್ನಿನ ಲಾಂಛನ ಬಿಡಗಡೆ, ಉಚಿತ ಆರೋಗ್ಯ ಮೇಳ, ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ನಮನ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮವನ್ನು
ನ.೨೦ರಂದು ಹರಿಗೆಯಲ್ಲಿ ಆಯೋಜಿಸಲಾಗಿದೆ ಎಂದು ಪೌಂಡೇಷನ್ನಿನ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಆರ್.ಎಸ್. ಸತ್ಯನಾರಾಯಣ(ಸತೀಶ್) ಹೇಳಿದರು.
ಅವರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ.೨೦ರಂದು ಬೆಳಿಗ್ಗೆ ೯ ಗಂಟೆಗೆ ಸರ್ಜಿ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ಆಶಾಜ್ಯೋತಿ ರಕ್ತಕೇಂದ್ರದ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನ ತಪಾಸಣೆ,
ನೇತ್ರದಾನ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಇದರ ಸಾನಿಧ್ಯವನ್ನು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ.ಸ್ಟ್ಯಾನಿ ಡಿಸೋಜ ವಹಿಸುವರು.
ಡಾ. ಧನಂಜಯ ಸರ್ಜಿ ಶಿಬಿರ ಉದ್ಘಾಟಿಸುವರು. ಪ್ರಮುಖರಾದ ರವೀಂದ್ರನಾಥ್, ಎನ್. ವೆಂಕಟೇಶ್, ಎನ್. ಸಂಜಯಕುಮಾರ್, ಕೆ.ಟಿ. ಗಂಗಾಧ್ರ ಭಾಗವಹಿಸಲಿದ್ದು, ರೈತಮಹಿಳೆ ವನಜಾಕ್ಷಿ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕನ್ನಡಪರ ಸಂಘಟ
ನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾಂಗ್ರೆಸ್ ಜೆಡಿಎಸ್ ಮುಖಂಡರು, ಹರಿಗೆ ಗ್ರಾಮದ ಮುಖಂಡರು, ಭಾಗವಹಿಸಲಿದ್ದಾರೆ ಎಂದರು.
ಸಂಜೆ ೬-೩೦ಕ್ಕೆ ಪುನೀತ್ ರಾಜ್ಕುಮಾರ್ ನಮನ ಹಾಗೂ ಫೌಂಡೇಷನ್ನಿನ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಸಾನಿಧ್ಯವನ್ನು ಬಸವಕೇಂದ್ರದ ಬಸವಮರುಳಸಿದ್ದ ಸ್ವಾಮೀಜಿ ಹಾಗೂ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಪಂಚರತ್ನ ಮಾತಾಜಿ ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಕೆ.ಎಸ್. ಈಶ್ವರಪ್ಪ ನೆರವೇರಿಸುವರು. ಮಾಜಿ ಶಾಸಕಿ ಶಾರದಾ ಪೂರ‍್ಯಾ ನಾಯ್ಕ, ಲಾಂಛನ ಬಿಡುಗಡೆ ಮಾಡುವರು. ಪುನೀತ್ ಭಾವಚಿತ್ರಕ್ಕೆ ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ, ಬಿ.ಕೆ. ಸಂಗಮೇಶ್ ಪುಷ್ಪನiನ
ಸಲ್ಲಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್, ಮಲೆನಾಡು ಸುದ್ದಿಪತ್ರಿಕೆ ಬಿಡುಗಡೆ ಮಾಡುವರು. ಅಲ್ಲದೆ ಶಾಸಕರಾದ ರುದ್ರೇಗೌಡರು, ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸೇರಿದಂತೆ ಹಲವರು ಗಣ್ಯರು ಭಾಗವಹಿಸಲಿದ್ದಾರೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥ್, ಕೃಷ್ಣ, ವಾಟಾಳ್ ಮಂಜುನಾಥ್, ಟಿ.ಎಸ್.ಸುರೇಶ್ ಶೆಟ್ಟಿ, ಎನ್.ವೆಂಕಟೇಶ್ ಮತ್ತಿತರರಿದ್ದರು.