ಶಿವಮೊಗ್ಗ
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಸಭೆ ಇಂದು ಪ್ರಾಧಿಕಾರದ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸರ್ಕಾರದಿಂದ ಅನುಮತಿ ಪಡೆದು ಸೂಡಾ ವ್ಯಾಪ್ತಿಯ ಕೆಲವು ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು ಹಾಗೂ ನಿವೇಶನಗ ಳನ್ನು ಬಿಡುಗಡೆ ಮಾಡಲಾಯಿತು. ಸೂಡಾದಿಂದ ನಿರ್ಮಿಸಲಾದ ಲೇಔಟ್ಗಳ ಅಭಿವೃದ್ಧಿಗೆ ೪ ಕೋಟಿ ರೂಗಳನ್ನು ಬಿಡುಗಡೆ ಮಾಡಲಾಯಿತು.
ಭದ್ರಾವತಿ ಶಿವಮೊಗ್ಗ ೨ ಜಂಕ್ಷನ್ ಅಭಿವೃದ್ಧಿಗೆ ೨ ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಲಾಯಿತು. ಊರಗಡೂರು ಲೇಔಟ್ ಅಭಿವೃದ್ಧಿ ನಡೆಯುತ್ತಿದ್ದು, ಅದರ ವಿತರಣೆ ಬಗ್ಗೆ ಮುಂದಿನ ಮೀಟಿಂಗ್ನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೂಡಾ ಅಧ್ಯಕ್ಷ ನಾಗರಾಜ್ ಹೇಳಿದ್ದಾರೆ.
ವಾಜಪೇಯಿ ಬಡಾವಣೆ ವಿವಾದಕ್ಕೆ ಸಂಬಂಧಿ ಸಿದಂತೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಸಮಸ್ಯೆ ಬಗೆಹರಿಸಲು ತೊಡಕಾಗಿದೆ. ಈ ಬಗ್ಗೆ ಚರ್ಚೆ ನಡೆದಿದ್ದು, ಆದಷ್ಟು ಬೇಗ ಇತ್ಯರ್ಥಗೊಳಿ ಸಲಾಗುವುದು ಎಂದರು. ಚೇಂಜ್ ಆಫ್ ಲ್ಯಾಂಡ್ಗೆ ಹಲವು ಅರ್ಜಿಗಳು ಬಂದಿದ್ದು, ಸರ್ಕಾರದ ಅನುಮತಿಗೆ ರವಾನಿಸಲಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಕೆ.ಎಸ್.ಈಶ್ವರಪ್ಪ ನವರು ವಹಿಸಿದ್ದರು. ಸದಸ್ಯರಾದ ಖದಿರೇಶ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.